ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದ ಮೇಲೆ ಜನಾರ್ದನ್ ರೆಡ್ಡಿ ಅವರು ಜೈಲು ಸೇರಿದ್ದರು. ಆದರೆ ಅದನ್ನು ಸವಾಲಾಗಿ ಸ್ವೀಕರಿಸಿ ಜಾಮೀನು ಮೇಲೆ ಹೊರ ಬಂದಿರುವ ಜನಾರ್ಧನ್ ರೆಡ್ಡಿ ಅವರು, ಇದೀಗ ನೇರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿದ್ದಾರೆ..
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರದ ದುರಾಸೆಯಿಂದಾಗಿ ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಮಾಡಿ ನನ್ನನ್ನು ಜೈಲಿಗೆ ಕಳುಹಿಸುವ ಹುನ್ನಾರ ಮಾಡಿದ್ದರೆಂದು ಹೇಳಿದ್ದಾರೆ.
ಅಧಿಕಾರ ಪಡೆವ ದುರಾಸೆಗಾಗಿ ಸಿದ್ದರಾಮಯ್ಯ ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಮಾಡಿ ನನ್ನನ್ನು ಜೈಲಿಗೆ ಹೋಗುವಂತೆ ಮಾಡಿದ್ದರು ಎಂದು ಶಾಸಕ ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ. ಇದನ್ನೂ ಓದಿ: ವಿಮಾನ ಪತನಗೊಂಡಿರುವುದು ಅತ್ಯಂತ ದುರ್ದೈವದ ಸಂಗತಿ: ಲಕ್ಷ್ಮೀ ಹೆಬ್ಬಾಳಕರ್
ರಾಜಕೀಯ ದುರಾಸೆಯಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ, ತನ್ನ ವಿರುದ್ಧ ಅಕ್ರಮ ಗಣಿಗಾರಿಕೆಯ ಆರೋಪ ಹೊರೆಸಿ ಜೈಲಿಗೆ ಹೋಗುವಂತೆ ಮಾಡಿದ್ದರು. ಆದರೆ, ಸಿಬಿಐ ಕೋರ್ಟ್ ತನ್ನ ತೀರ್ಪಿನಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂದು ಹೇಳಿದೆ ಮತ್ತು ಓಬಳಪುರಂ ಮೈನಿಂಗ್ ಕಂಪನಿಯಿಂದ ಬೇರೆ ದೇಶಗಳಿಗೆ ಅದಿರನ್ನು ರಫ್ತು ಮಾಡಿದರೆಂಬ ಅರೋಪವನ್ನೂ ನ್ಯಾಯಾಲಯ ಹೊಡೆದು ಹಾಕಿದೆ ಎಂದು ರೆಡ್ಡಿ ಹೇಳಿದರು.
