ಗುಜರಾತಿನ ಅಹಮಬಾದ್ ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಅದೆಷ್ಟೋ ಜೀವಗಳು ಬಲಿಯಾಗಿದ್ದಾವೆ. ಈ ದುರಂತಕ್ಕೆ ಪ್ರಮುಖ ಕಾರಣ ಏನು ಎಂಬುದೇ ಇಲ್ಲಿವರೆಗೂ ತಿಳಿದು ಬಂದಿಲ್ಲಾ
ಸದ್ಯ ವಿಮಾನ ದುರಂತಕ್ಕೆ ಕಾರಣ ಏನಿಂದು ತಿಳಿದುಬಂದಿಲ್ಲ. ವಿಮಾನದಲ್ಲಿ ಅನುಭವಿ ಪೈಲೆಟ್ ಇದ್ದರು. ಮುಖ್ಯವಾಗಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅನ್ನೋರು ವಿಮಾನ ಆಪರೇಟ್ ಮಾಡ್ತಿದ್ದರು. ಇವರು ಬರೋಬ್ಬರಿ 8200 ಗಂಟೆಗಳ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ಇವರು ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದನ್ನೂ ಓದಿ: 625 ಅಡಿ ಎತ್ತರದಿಂದ ಕಂಟ್ರೋಲ್ ತಪ್ಪಿ ನೆಲಕ್ಕೆ ಉರುಳಿದ ವಿಮಾನ
ಜೊತೆಗೆ ಸಹ ಪೈಲೆಟ್ ಕ್ಲೈವ್ ಕುಂದರ್ ಕೂಡ ಇದ್ದರು. ಇವರಿಗೆ 1,100 ಗಂಟೆಗಳ ಹಾರಾಟ ನಡೆಸಿದ ಅನುಭವ ಹೊಂದಿದ್ದರು. ATC ಪ್ರಕಾರ ವಿಮಾನವು ರನ್ವೇ ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆಗಿದೆ. ಟೇಕ್ ಆಫ್ ಆದ 5 ನಿಮಿಷದಲ್ಲಿ ಪತನಗೊಂಡಿದೆ. ತಾಂತ್ರಿಕ ದೋಷ ಸಂಭವಿಸಿರುವ ಬಗ್ಗೆ ಮೇಡೇ ಕರೆ ನೀಡಲಾಗಿದೆ. ಅಪಾಯದ ಕರೆಯ ನಂತರ ವಿಮಾನವು ATC ಸಂಪರ್ಕಕ್ಕೆ ಸಿಗಲಿಲ್ಲ ಎಂದು ವರದಿಯಾಗಿದೆ.
