ಅಹ್ಮದಾಬಾದ್: ಗುಜರಾತಿನ ಅಹ್ಮದಾಬಾದ್ ನಲ್ಲಿ ಇಂದು (ಗುರುವಾರ ಜೂನ್ 12) ರಂದು ಮಧ್ಯಾಹ್ನ 1:30 ನ ಸುಮಾರುನಲ್ಲಿ ಭೀಕರ ಅಪಘಾತ ಒಂದು ನಡೆದಿದ್ದು, ಟೇಕ್ ಆಫ್ ಆಗುವ ಸಮಯದಲ್ಲಿ ವಿಮಾನ ಏಕಾಏಕಿ ಕಂಟ್ರೋಲ್ ಕಳೆದುಕೊಂಡು ನೆಲಕ್ಕುರುಳಿರುವುದರಿಂದ ವಿಮಾನದಲ್ಲಿದ್ದ ಪ್ರಯಾಣಿಕರ ಗತಿ ಅದೇನ್ ಆಗಿದಿಯೋ ಆ ದೇವರಿಗೆ ಗೊತ್ತು.
ಹೌದು, ಲಂಡನ್ ಗೆ ಕರೆದೊಯ್ಯುತ್ತಿದ್ದ ವಿಮಾನವು ಏಕ ಏಕಾಏಕಿ ಟೇಕ್ ಆಫ್ ಆಗುವ ಸಂದರ್ಭದಲ್ಲಿ ಸುಟ್ಟು ಬಸ್ಮವಾಗಿದೆ. ಅಹ್ಮದಾಬಾದ್ ಏರ್ಪೋರ್ಟ್ನಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್ ದಲ್ಲಿ ಪತನಗೊಂಡಿದೆ.
ಇನ್ನು ಈ ವಿಮಾನದಲ್ಲಿ ಗುಜರಾತ್ನ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿಯಿದ್ದರು. ಇದನ್ನೂ ಓದಿ: BREAKING NEWS: ಅಹಮದಾಬಾದ್ ನಲ್ಲಿ ಭೀಕರ ವಿಮಾನ ದುರಂತ!
ಏರ್ ಇಂಡಿಯಾ ವಿಮಾನ ಅಹ್ಮದಾಬಾದ್ನಿಂದ ಲಂಡನ್ಗೆ ಟೇಕ್ ಆಫ್ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಬರೋಬ್ಬರಿ 625 ಅಡಿ ಎತ್ತರದಿಂದ ಕಂಟ್ರೋಲ್ ಕಳೆದುಕೊಂಡು ನೆಲಕ್ಕೆ ಬಿದ್ದಿದೆ. ಜನಬಿಡ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಪತನಗೊಂಡ ವಿಮಾನ ಮನೆ ಮೇಲೆ ಬಿದ್ದಿದೆ. ಭಾರೀ ಜೀವಹಾನಿ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
