ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಯಲಹಂಕದ ನಿವಾಸಿ ದಿವ್ಯಾಂಶಿ ಬಿ.ಎಸ್, ಬೆಂಗಳೂರು ಉತ್ತರ ತಾಲ್ಲೂಕಿನ ಪ್ರಜ್ವಲ್.ಜಿ, ತಮಿಳುನಾಡಿನ ಕಾಮಾಕ್ಷಿದೇವಿ ಎಂ.ಆರ್ ಹಾಗೂ ಎಂ.ಎಸ್. ರಾಮಯ್ಯ ಬಡಾವಣೆಯ ನಿವಾಸಿ ಭೂಮಿಕ್ ಅವರ ಕುಟುಂಬದವರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾದ ರೂ. 25 ಲಕ್ಷ ಪರಿಹಾರದ ಚೆಕ್ ನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ. ಜಿ ಅವರು ಮೃತರ ಮನೆಗಳಿಗೆ ತೆರಳಿ ವಿತರಿಸಿದರು.
