ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಇದರಲ್ಲಿ ಮಹತ್ವದ ಗ್ಯಾರಂಟಿಯಾದ ಶಕ್ತಿ ಯೋಜನೆಯಿಂದ ಸಾವಿರಾರು ಹೆಣ್ಣುಮಕ್ಕಳು ಒಂದು ಊರುಗಳಿಂದ ಇನ್ನೊಂದು ಊರಿಗೆ ಉಚಿತವಾಗಿ ಪ್ರಯಾಣ ನಡೆಸುತ್ತಿದ್ದಾರೆ.
ಈ ಸದುಪಯೋಗವನ್ನು ರಾಜ್ಯದ ಎಲ್ಲಾ ಮಹಿಳೆಯರು ಉಪಯೋಗಿಸುತ್ತಿರುವ ಬೆನ್ನಲ್ಲೇ ಮತ್ತೆ ಇದೀಗ ಬಿಎಂಟಿಸಿ ವತಿಯಿಂದ ದಿವ್ಯ ದರ್ಶನ ಯೋಜನೆಯನ್ನು ಪ್ರಾರಂಭ ಗೊಳಿಸಿದೆ.
ಈಗಾಗಲೇ ದಿವ್ಯ ದರ್ಶನ ಯೋಜನೆ ಮೇ 31 ರಿಂದ ಪ್ರಾರಂಭವಾಗಿದ್ದು ನಗರದಲ್ಲಿ ಉತ್ತಮ ಪ್ರದರ್ಶನ ಸಿಗುತ್ತಿರುವುದರಿಂದ ವಾರದ ಎಲ್ಲಾ ದಿನಗಳಲ್ಲಿ ದಿವ್ಯದರ್ಶನ ಬಸ್ ಗಳನ್ನು ಬಿಡಲು ಬಿಎಂಟಿಸಿ ಮುಂದಾಗಿದೆ.
ಹೌದು, ನಗರದಲ್ಲಿರುವ ಹೆಸರಾಂತ ದೇವಸ್ಥಾನಗಳಿಗೆ ಬಿಎಂಟಿಸಿ ವತಿಯಿಂದ ದಿವ್ಯ ದರ್ಶನ ಯೋಜನೆಯ ಮೂಲಕ ಬಸ್ಸುಗಳನ್ನು ಬಿಡಲಾಗುತ್ತಿದ್ದು, ಇದಕ್ಕೆ ಮೊದಲ ದಿನದಿಂದಲೇ ಜನರಿಂದ ಒಲವು ಸಿಕ್ಕಿರುವುದರಿಂದ ವಾರದ ಎಲ್ಲಾ ದಿನಗಳಲ್ಲೂ ದಿವ್ಯ ದರ್ಶನ ಬಸ್ಗಳ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಟಿಸಿ ಅಧಿಕಾರಿಯು ತಿಳಿಸಿದ್ದಾರೆ.
ಇನ್ನು ‘ದಿವ್ಯ ದರ್ಶನ’ಮೆಜೆಸ್ಟಿಕ್ನ ಕೆಂಪೇಗೌಡ ನಿಲ್ದಾಣದಿಂದ ಹೊರಡುವ ಬಸ್ ಗಳು ಆಂಜನೇಯ ಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಶ್ರೀದೇವಿ ಕರುಮಾರಿ ಅಮ್ಮನವರ ದೇವಸ್ಥಾನ, ಓಂಕಾರ ಹಿಲ್ಸ್, ವಸಂತಪುರ ಇಸ್ಕಾನ್ ದೇವಸ್ಥಾನ, ಆರ್ಟ್ ಆಫ್ ಲಿವಿಂಗ್, ಬನಶಂಕರಿ ದೇವಸ್ಥಾನಗಳಿಗೆ ಭೇಟಿ ನೀಡಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ವಾಪಸ್ ಆಗುತ್ತದೆ. ಇದನ್ನೂ ಓದಿ: ಮೋದಿ ಬದುಕಿರುವುದು ಪ್ರಚಾರದಿಂದ: ಸಿಎಂ
ಬೆಳಿಗ್ಗೆ 8.30ಕ್ಕೆ ಹೊರಟು ಸಂಜೆ 6.05ಕ್ಕೆ ವಾಪಸ್ ಆಗುವುದರಿಂದ ಜನರು ‘ದಿವ್ಯ ದರ್ಶನ’ಕ್ಕೆ ಒಲವು ತೋರಿಸಿದ್ದರು. ಮೊದಲ ದಿನವೇ 4 ಬಸ್, 2ನೇ ದಿನವಾದ ಭಾನುವಾರ 4 ಬಸ್ಗಳಲ್ಲಿ ಜನರು ಸಂಚರಿಸಿದ್ದರು. ಜನರ ಉತ್ತಮ ಪ್ರತಿಕ್ರಿಯೆ ಗಮನಿಸಿದ ಬಿಎಂಟಿಸಿ ಅಧಿಕಾರಿಗಳು, ಇದೀಗ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಮಾತ್ರವಲ್ಲದೆ, ವಾರದ ಎಲ್ಲಾ ದಿನಗಳಲ್ಲಿ ‘ಬೆಂಗಳೂರು ದಿವ್ಯ ದರ್ಶನ’ ನಡೆಸಲು ನಿರ್ಧರಿಸಿದ್ದಾರೆ. ಜೂನ್.2ರಿಂದಲೇ ಈ ಸೇವೆ ಆರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
