ಬೆಂಗಳೂರು: ಇಂದು ವಿಶ್ವ ಪರಿಸರ ದಿನಾಚರಣೆ. ಪ್ರತಿಯೊಂದು ಜೀವಿಗೂ ಜೀವಿಸಲು ಪರಿಸರ ಅತಿ ಪ್ರಮುಖ ಪಾತ್ರವಹಿಸುತ್ತದೆ. ಪರಿಸರ ಇಲ್ಲದಿದ್ದರೆ ಯಾವ ಜೀವಿಯು ಕೂಡ ಜೀವಿಸಲು ಸಾಧ್ಯವಿಲ್ಲ.
ಭೂಮಿಯ ಮೇಲೆ ಹಚ್ಚುವ ಹಸಿರಿನ ನಡುವೆ ವನ್ಯಜೀವಿಗಳು ಸೇರಿದಂತೆ ಮನುಷ್ಯ, ಕ್ರಿಮಿಕೀಟಗಳು ಹೀಗೆ ಕೋಟಿಗಟ್ಟಲೆ ಜೀವಿಗಳ ಬದುಕು ಸಾಗುವುದೇ ಈ ಪರಿಸರದ ಮಧ್ಯ.
ಇಡೀ ವಿಶ್ವದಾದ್ಯಂತ ಪರಿಸರ ಚೆನ್ನಾಗಿದ್ದರೆ ಮಾತ್ರ ಎಲ್ಲಾ ಜೀವಿಗಳು ಆರೋಗ್ಯಕರವಾಗಿರಲು ಸಾಧ್ಯ. ಪರಿಸರಹದಗೆಟ್ಟರೆ ಪ್ರತಿಯೊಂದು ಜೀವಿಯ ಆರೋಗ್ಯ ಹದಗೆಟ್ಟು ಅನಾಹುತಗಳೇ ಆಗಿರುವುದು ಎಷ್ಟೋ ಉದಾಹರಣೆಗಳಿವೆ.
ಹೌದು, ಪ್ರತಿ ವರ್ಷ ಜೂನ್ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ.
