ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಒಬ್ಬ ನಟಿ ಮದುವೆಯಾದರೆ ತಮ್ಮ ಕುಟುಂಬದ ಕೆಲಸಗಳಲ್ಲಿ ಬ್ಯುಸಿಯಾಗಿ ನಟನೆಯಿಂದ ದೂರ ಉಳಿಯುತ್ತಾರೆ. ಆದರೆ ನಟಿ ಸೋನಾಲ್ ಅವರು ಮದುವೆಯಾದ ಬಳಿಕವೂ ನಟನೆಯಲ್ಲಿ ಮುಂದುವರೆದಿದ್ದು ಖುಷಿಯ ಸಂಗತಿ ಎಂದು ಹಿರಿಯ ನಟಿ ಶ್ರುತಿ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸೋನಾಲ್ ಅವರ ಪತಿ ತರುಣ್ ಸುಧೀರ್ ಅವರ ಬೆಂಬಲದಿಂದ ಸೋನಾಲ್ ಅವರು ಮದುವೆಯಾದ ನಂತರ ಚಿತ್ರರಂಗದಲ್ಲಿ ಮುಂದುವರಿಯುತ್ತಿರುವುದು ಕುಷಿಯ ಸಂಗತಿ. ಚಿತ್ರರಂಗದಲ್ಲಿ ಸೋನಾಲ್ ಅವರು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲೆಂದು ಈ ಸಂದರ್ಭದಲ್ಲಿ ನಾನು ಆಶಿಸುತ್ತೇನೆ ಎಂದು ಶ್ರುತಿ ಅವರು ಹೇಳಿದ್ದಾರೆ. ಇದನ್ನೂ ಓದಿ: ‘ಕಣ್ಣಪ್ಪ’ ಚಿತ್ರ ಮಾಡಲು ಧೈರ್ಯ ಬೇಕು: ಶಿವಣ್ಣ
ಎಷ್ಟೋ ಗಂಡಸರು ಮದುವೆಯಾದ ಮೇಲೆ ಪತ್ನಿ ತಮ್ಮ ಮನೆ ಜವಾಬ್ದಾರಿ ವಹಿಸಿಕೊಂಡು ಹೋದರೆ ಸಾಕು ಎನ್ನುತ್ತಿರುವ ಈಗಿನ ಕಾಲದಲ್ಲಿ ತರುಣ್ ರವರು ತಮ್ಮ ಪತ್ನಿ ಸೋನಾಲ್ ರನ್ನು ಚಿತ್ರರಂಗದಲ್ಲಿ ಮುಂದುವರೆಯಲು ತಮ್ಮ ಪ್ರೋತ್ಸಾಹ ತೋರಿಸುತ್ತಿರುವುದು ಇದು ಬೇರೆಯವರಿಗೂ ಮಾದರಿಯಾಗಲಿ ಎಂದು ಹೇಳಿದರು.
