Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಶಾಲಾ ಆರಂಭಕ್ಕೆ ಭರ್ಜರಿ ಸಿದ್ಧತೆ
  • State

ಶಾಲಾ ಆರಂಭಕ್ಕೆ ಭರ್ಜರಿ ಸಿದ್ಧತೆ

admin May 29, 2025
Spread the love

ಶಹಾಪುರ: ಎರಡು ತಿಂಗಳು ಬೇಸಿಗೆ ರಜೆ ಮೂಡ್‌ನಲ್ಲಿದ್ದ ವಿದ್ಯಾರ್ಥಿ ಸಮೂಹ ಇದೀಗ ಹೊಸ ತರಗತಿಗೆ ಹೊಗುವ ಸಂಭ್ರಮದಲ್ಲಿದ್ದರೆ. ಪಾಲಕರು ಅವರಿಗೆ ಅಗತ್ಯವಾದ ಶೈಕ್ಷಣೀಕ ಸಾಮಗ್ರಿ ಖರೀದಿಯಲ್ಲಿ ಮುಗ್ನರಾಗಿದ್ದಾರೆ. ತಾಲೂಕಿನಲ್ಲಿ ಶೈಕ್ಷಣಿಕ ಚಟುವಟಿಕೆ ಮತ್ತೆ ಗರಿಗೆದರಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಪ್ರಾರಂಭಗೊಂಡಿದ್ದು, ಬೇಸಿಗೆ ರಜೆ ಮೋಜಿಗಾಗಿ ಸಂಭಂಧಿಕರು, ಬಂಧುಗಳ ಊರುಗಳುಗೆ ತೆರಳಿದ್ದ ವಿದ್ಯಾರ್ಥಿಗಳು ಹಿಂದಿರುಗುತ್ತಿದ್ದಾರೆ. ಶಾಲೆ ಆರಂಭ ಆಗುವ ಮುನ್ನವೇ ಓದಿಗೆ ಬೇಕಿರುವ ಪಠ್ಯಪುಸ್ತಕ, ನೋಟ್‌ಬುಕ್, ಸಮವಸ್ತ್ರಗಳನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಕ್ಕಳೊಂದಿಗೆ ಪಾಲಕರು ತೊಡಗಿದ್ದಾರೆ.
ಶಾಲಾ ವಾಹನಗಳಿಗೆ ಬೇಡಿಕೆ
2 ತಿಂಗಳಿನಿಂದ ಶಾಲೆಗೆ ರಜೆ ಇದ್ದ ಕಾರಣ ಶಾಲಾ ವಾಹನಗಳ ಚಾಲಕರು ಶೈಕ್ಷಣೀಕ ವರ್ಷಾರಂಭದ ಉತ್ಸಾಹದಲ್ಲಿದ್ದಾರೆ. ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಆಟೋ, ಖಾಸಗಿ ವಾಹನ ಮಾಲೀಕರು ಮತ್ತು ಚಾಲಕರು, ಹೊಸದಾಗಿ ಶಾಲೆ ಸೇರಿಸುವ ವಿದ್ಯಾರ್ಥಿಗಳ ಪಾಲಕರ ವಿಶ್ವಾಸ ಗಳಿಸಿಕೊಳ್ಳಲು ತವಕಿಸುತ್ತಿದ್ದಾರೆ. ಕೆಲವು ಖಾಸಗಿ ಶಾಲೆಗಳು ತಮ್ಮ ವಾಹನ ಸಂಚಾರ ದರವನ್ನು ಈಗಾಗಲೇ ಹೆಚ್ಚಿಸುತ್ತಿವೆ.
ಗ್ರಾಮೀಣ ಭಾಗದಲ್ಲಿ ಚಿಣ್ಣರ ಸ್ವಾಗತಕ್ಕೆ ಸಕಲ ಸಿದ್ಧತೆ
ಈಗಾಗಲೇ ಮೆ.29 ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಮೂಲಕ ಶಿಕ್ಷಣ ಇಲಾಖೆ ಸಿದ್ದತೆ ಕೈಗೊಂಡಿದ್ದು, ಶಿಕ್ಷಣ ಇಲಾಖೆಯ ಸೂಚನೆಯಂತೆ ಶಾಲೆಗಳಲ್ಲಿ ಸ್ವಚ್ಚತಾ ಕಾರ್ಯಗಳು ಭರದಿಂದ ಸಾಗಿದವು. ಸಿಬ್ಬಂದಿ ಜೊತೆ ಕೈಜೋಡಿಸಿ ಶಿಕ್ಷಕರು ಶಾಲಾ ಆವರಣ, ತರಗತಿ ಕೋಣೆ, ಅಡುಗೆ ಕೋಣೆ ಸೇರಿ ಅಡಿಗೆ ಪರಿಕರ ಸ್ವಚ್ಚತೆ ಹಾಗೂ ಶಾಲೆಗಳ ಸ್ವಚ್ಚತೆ ಕಾರ್ಯ ನಡೆಸಿದರು.

ತಾಲೂಕಿನಲ್ಲಿ 383 ಸರ್ಕಾರಿ ಶಾಲೆಗಳಿದ್ದು ಈಗಾಗಲೇ ಪ್ರಸಕ್ತ ವರ್ಷಕ್ಕೆ ಪುಸ್ತಕಗಳು ಮತ್ತು ಸಮವಸ್ತ್ರಗಳ ಹಂಚಿಕೆ ಕಾರ್ಯ ಮಾಡುತ್ತಿದ್ದಾರೆ. ಎಲ್ಲಾ ಪಠ್ಯಪುಸ್ತಕಗಳು ಬಂದಿಲ್ಲಾ. ಇನ್ನೇರಡು ದಿನಗಳಲ್ಲಿ ಪೂರ್ಣವಾಗಿ ಮಕ್ಕಳ ಕೈಸೆರಲಿವೆ. ಇನ್ನು ಶಿಕ್ಷಕರ ಕೊರತೆಯಿದ್ದಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಮೇಲಾಧಿಕಾರಿಗಳು ಸೂಚಿಸಿದು, ಇನ್ನೇರಡು ದಿನಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಮತ್ತು ದಾಖಲಾತಿ ಹೆಚ್ಚಿಸಲು ಸರ್ಕಾರಿ ಶಾಲೆಯ ವೈಶಿಷ್ಟ ಕುರಿತು ಪೋಸ್ಟರ್ ಹಾಗೂ ಕರಪತ್ರಗಳನ್ನು ತಯಾರಿಸಿ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್ ಹರಗಿ ಹೇಳಿದರು.
ಶಿಕ್ಷಣ ಇಲಾಖೆಗೆ ಯಾಮಾರಿಸಿದರು
ನಾಗನಟಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದರಿಯಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಡೀ ಶಿಕ್ಷಣ ಇಲಾಖೆಗೆ ಕಳೆದ ವರ್ಷದ ತ್ಯಾಜ್ಯ ತುಂಬಿದ ಶಾಲೆಯ ಆವರಣದ ಭಾವಚಿತ್ರ, ವಿಡಿಯೋಗಳನ್ನು ಹಾಕಿ ಇಡೀ ಶಿಕ್ಷಣ ಇಲಾಖೆಗೆ ಗೊಂದಲಕ್ಕೀಡಾಗುವಂತೆ ಮಾಡಿ ಯಾಮಾರಿಸಿದ್ದು, ಇದರಿಂದ ಕೂಡಲೇ ಸಿಇಓ, ಇಒ ಅವರು ಶಾಲೆಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು ಎಂದು ಕ್ಷೇತ್ರ ಶೀಕ್ಷಣಾಧಿಕಾರಿ ಮತ್ತು ಶಾಲೆಯ ಮುಖ್ಯಗುರುಗಳು ತಿಳಿಸಿದರು. ಶೈಕ್ಷಣೀಕ ವರ್ಷಾರಂಭಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭರದ ಸಿದ್ಧತೆ ನಡೆಸಿದ ನಡುವೆಯೇ ತಾಲೂಕಿನ ಕೆಲ ಸರ್ಕಾರಿ ಶಾಲೆಗಳ ತರಗತಿ ಕೋಣೆಗಳು ಸೋರುತ್ತಿದ್ದು, ಮಕ್ಕಳನ್ನು ಅಪಾಯಕ್ಕೆ ಆಹ್ವಾನಿಸುತ್ತಿದ್ದು, ಈ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನೀಧಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.

About the Author

admin

Administrator

Visit Website View All Posts

Spread the love

Post navigation

Previous: ಮಾಜಿ ಯೋಧರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಲು ಚಿಂತನೆ: ಡಿಕೆಶಿ
Next: ಫೈನಲ್ ಗೆ ಲಗ್ಗೆ ಇಟ್ಟ ಆರ್ ಸಿ ಬಿ

Views:

24

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.