ಬೆಂಗಳೂರು: ವಾರ್ತಾಭಾರತಿ ಪತ್ರಿಕೆಯ “ಸ್ವಾವಲಂಬಿ ಬದುಕು ಕೊಟ್ಟ ಗ್ಯಾರಂಟಿ ಸರ್ಕಾರ” ಕಿರು ಹೊತ್ತಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಜನಾರ್ಪಣೆಗೊಳಿಸಿದರು.
ವಾರ್ತಾಭಾರತಿ ಪತ್ರಿಕೆ ರಾಜ್ಯಾದ್ಯಂತ ಸುತ್ತಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತಾಗಿ ರಾಜ್ಯದ ಬಡವರು, ಮಧ್ಯಮ ವರ್ಗದವರು ಹಾಗೂ ಶ್ರಮಿಕ ಸಮುದಾಯದ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದರ ಸಾರಸಂಗ್ರಹವನ್ನು ಈ ಪುಸ್ತಕದಲ್ಲಿ ದಾಖಲಿಸಿದೆ.
ಸರ್ಕಾರದ ಅಥವಾ ವಾರ್ತಾ ಇಲಾಖೆಯಿಂದ ಯಾವುದೇ ರೀತಿಯ ಆರ್ಥಿಕ ನೆರವನ್ನು ಪಡೆಯದೇ, ಪತ್ರಿಕೆಯೇ ತನ್ನ ಆಸಕ್ತಿ ಮತ್ತು ಜನಪರ ಕಾಳಜಿಯಿಂದ ಸಮೀಕ್ಷೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿರುವುದಕ್ಕೆ, ಮುಖ್ಯಮಂತ್ರಿಗಳು ವಾರ್ತಾಭಾರತಿ ಪತ್ರಿಕಾ ತಂಡದ ಕಾಳಜಿಗೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: SSIT ಸಂಸ್ಥೆಗಳ ಮೇಲೆ ಇಡಿ ದಾಳಿ ಡಿಸಿಎಂ ಹೇಳಿದ್ದೇನು?
