ಶಹಾಪುರ: ಆದಾಯ ಮೀರಿ ಆಸ್ತಿ ಹೊಂದಿದ ಹಾಗೂ ಭ್ರಷ್ಟಚಾರ ಆರೋಪ ಸಂಭಂಧ ತಹಸೀಲ್ದಾರ್ ಉಮಾಕಾಂತ ಹಳ್ಳೆ ಮನೆ, ಕಚೇರಿ ಮೇಲೆ (ಗುರುವಾರ ಮೇ. 15) ರಂದು ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆಗೆ ಸಂಭಂಧಿಸಿದ ಯಾವುದೇ ದಾಖಲಾತಿಗಳು ಸಿಕ್ಕಿಲ್ಲಾ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ತಹಸೀಲ್ದಾರ ಅವರಿಗೆ ಸಂಭಂಧಿಸಿದವರ ಮನೆಗಳು, ಕಚೇರಿ ಇತರ ಸ್ಥಳಗಳ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಮನೆಯಲ್ಲಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿ ಮೂಲದ ಉಮಾಕಾಂತ ಹಳ್ಳೆ ಅವರು 3 ವರ್ಷಗಳಿಂದ ನಗರದ ತಹಸೀಲ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಮನೆಯ ಮೇಲೆ ದಾಳಿ ಮಾಡಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್ ಇನಾಂದಾರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಬೆಳ್ಳಂಬೆಳಗ್ಗೆ 7 ಗಂಟೆಗೆ ಲೋಕಾ ಶಾಕ್ ನೀಡಿದೆ. ಇಡೀ ದಿನ ಪರಿಶೀಲನೆ ನಡೆಸಿ ಕೆಲವೊಂದು ಮುಖ್ಯವಾದ ಕಡತಗಳನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಡಿಕೆಶಿ ಜನ್ಮದಿನ; ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್
ಈ ಸಂದರ್ಭದಲ್ಲಿ ಇನ್ಸಪೇಕ್ಟರ್ ಗಳಾದ ಶ್ರೀಕಾಂತ ಸ್ವಾಮಿ, ಕುಶಾಲ್, ರಮೇಶ, ಜಗಧೀಶ ,ಅರ್ಜುನಪ್ಪ ಬೀದರ್ ಸೇರಿದಂತೆ ಇತರರು ಇದ್ದರು.
