ಬೆಂಗಳೂರು: ನಾವೆಲ್ಲರೂ ಕನ್ನಡಿಗರು, ನಾವು ಹಿಂದೂಸ್ತಾನಿಗಳು. ಪಾಕಿಸ್ತಾನ ನಮಗ್ಯಾವತ್ತಿದ್ದರೂ ಬದ್ಧ ವೈರಿ, ನಾನು ಪಾಕಿಸ್ತಾನದ ವಿರುದ್ಧ ಹೋರಾಡಲು ಒಬ್ಬ ಮಂತ್ರಿಯಾಗಿ ತಯಾರಿದ್ದೇನೆ ಎಂದು ಸಚಿವ ಜಮೀರ್ ಅಹ್ಮದ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಬಿಟ್ಟರೆ ಸೂಸೈಡ್ ಬಾಂಬ್ ಕಟ್ಟಿಕೊಂಡು ನಾನು ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ನನಗೆ ಅವಕಾಶ ಕೊಡಲಿ ನಾನು ಯುದ್ಧ ಮಾಡಲು ತಯಾರಿದ್ದೇನೆ ಎಂದು ಹೇಳಿದ್ದಾರೆ. ನಾನು ಕೇವಲ ಯಾವುದೇ ಜೋಶ್ ನಲ್ಲಿ ಹೇಳುತ್ತಿಲ್ಲ. ನನ್ನ ದೇಶಕೋಸ್ಕರ ನಾನು ಹೋರಾಡುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: UTK ಗೆ ಮಾತ್ರವಲ್ಲ, ನನಗೂ ಜೀವ ಬೆದರಿಕೆ ಕರೆ ಬಂದಿವೆ: ಸಿಎಂ
ನಾನು ಪೂಜಿಸುವ ಅಲ್ಲಾ ಮೇಲೆ ಆಣೆ ಮಾಡಿ ಹೇಳುತ್ತೇನೆ, ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾನು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ರೆಡಿ ಇದ್ದೇನೆ ನಡೀರಿ ಎಲ್ಲರೂ ಯುದ್ಧ ಮಾಡಲು ಹೋಗೋಣ ಎಂದು ಹೇಳಿದ್ದಾರೆ.
