ಬೆಂಗಳೂರು: ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅದೀಗ ತಾನೇ ದಲಿತ ಸಂಘಟನೆಗಳು ಚಿಗುರೊಡೆದು ಹೆಮ್ಮರವಾಗುವ ಮುನ್ಸೂಚನೆ ಕೊಟ್ಟಿದ್ದವು, ದಲಿತ ಸಂಘರ್ಷ ಸಮಿತಿ ಇದಕ್ಕೆ ನಾಂದಿ ಹಾಡಿತ್ತು. 1965 ನವೆಂಬರ್ 20 ರಂದು ದೊಡ್ಡ ಬುಡ್ಡಪ್ಪ ಮತ್ತು ಅಂಜಿನಮ್ಮ ಅವರಿಗೆ 2ನೇ ಮಗನಾಗಿ ಬಿ. ಚನ್ನ ಕೃಷ್ಣಪ್ಪ ಅವರು ಜನಿಸುತ್ತಾರೆ. ಬಹಳ ಪ್ರತಿಭಾವಂತ ಆಗಿದ್ದ ಇವರು ತನ್ನ ಶಾಲಾ ದಿನಗಳಲ್ಲೇ ಹೋರಾಟದ ಅಂಗಳಕ್ಕೆ ದುಮುಕಿದರು. ಇವರು ಕಟ್ಟ ಅಂಬೇಡ್ಕರ್ ವಾದಿ ಆಗಿದ್ದು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು. ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷರು ಆಗಿದ್ದರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿಕೇಂದ್ರಿಕಾರಗೊಳಿಸುವುದರಲ್ಲಿ ಮುಖ್ಯ ಪಾತ್ರವಹಿಸಿದ್ದರು.
ಯಾವುದೇ ಜಾತಿ ಧರ್ಮ ಇದ್ದರೂ ಅವರ ಸಮಸ್ಯೆಗಳಿಗೆ ಸ್ಪಂದಿಸುವುದರಲ್ಲಿ ಮೊದಲಿಗರಾಗಿದ್ದರು, ಸಮಾಜ ಕಲ್ಯಾಣ ಇಲಾಖೆಗೆ ಒಂದು ಅಂಬೇಡ್ಕರ್ ಸ್ಪೂರ್ತಿ ಸೌಧ ಕಟ್ಟಿಸುವುದರಲ್ಲಿ, ಸುಮಾರು ಹತ್ತು ವರ್ಷಗಳಿಂದ ಸತತವಾಗಿ ಮಾನ್ಯ ಮುಖ್ಯ ಮಂತ್ರಿಗಳಿಗೆ ಒತ್ತಾಯ ತಂದು 2025 ನೇ ಏಪ್ರಿಲ್ 14 ರಂದು ಅಂಬೇಡ್ಕರ್ ಸ್ಪೂರ್ತಿ ಸೌಧ ಉದ್ಘಾಟನೆ ಮಾಡಿರುತ್ತಾರೆ.
ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಅಧಿಕಾರಿಗಳು ಆ ಅಂಬೇಡ್ಕರ್ ಸ್ಪೂರ್ತಿ ಸೌಧದಲ್ಲಿ ಸಿಗುವಂತ ಸೌಲಭ್ಯ ಹಾಗೂ ಸಾಮಾನ್ಯ ಜನರಿಗೂ ಸರಳವಾಗಿ ಸಿಗಬೇಕೆಂದು ಚನ್ನ ಕೃಷ್ಣಪ್ಪ ಅವರ ಉದ್ದೇಶ ಆಗಿತ್ತು, ಅಲ್ಲದೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಕಟ್ಟಿರುವ ಮನೆಗಳನ್ನು ಪೌರ ಕಾರ್ಮಿಕರಿಗೆ, ಹಾಗೂ ಬೆಂಗಳೂರಿನಲ್ಲಿ ಮನೆ ಇಲ್ಲದೆ ವಾಸ ಮಾಡುವ ಕಡು ಬಡ ಜನರಿಗೆ, ಸುಮಾರು 2500 ಮನೆಗಳನ್ನು ಹಂಚಿಕೆ ಮಾಡಿಸುವುದರಲ್ಲಿ ಇವರು ಮುಖ್ಯ ಪಾತ್ರವಹಿಸಿದ್ದಾರೆ,
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1923ರಲ್ಲಿ ಸ್ಥಾಪಿಸಿದ ಸಮತಾ ಸೈನಿಕ ದಳದ 100 ವರ್ಷ ತುಂಬಿದ ಸಂದರ್ಭದಲ್ಲಿ ಮೈಸೂರಿನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಏರ್ಪಡಿಸಿ ಬಾಬಾ ಸಾಹೇಬರ ಚಿತಾಭಸ್ಮವನ್ನ ಮುಂಬೈ ಇಂದ ಮೈಸೂರಿಗೆ ತಂದು ಅಲ್ಲಿ ಮೆರವಣಿಗೆ ಮಾಡಿದ ಕೀರ್ತಿ ಇವರಿಗೆ ಸಲ್ಲಬೇಕು.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ಸಂಘಟನೆ ಪ್ರಾರಂಭ ಮಾಡಿದರು. ರಾಜ್ಯದಲ್ಲಿ ಲಕ್ಷಾಂತರ ಅಭಿಮಾನಿಗಳು ಇವರ ಜೊತೆ, ಸದಾ ದಿನನಿತ್ಯ ತಾಲ್ಲೂಕ್ ಪಂಚಾಯ್ತಿಯ ಅದ್ಯಕ್ಷರಂತೆ, ಇವರ ಮನೆ ಮುಂದೆ ಕಾಯುತ್ತಾ ಕುಳಿತಿದ್ದರು. ಇವರು ಆಕಸ್ಮಿಕವಾಗಿ ಮರಣ ಹೊಂದಿರುವುದು ರಾಜ್ಯದ ತಳ ಸಮುದಾಯಗಳಿಗೆ ಅಪಾರ ನೋವು ಉಂಟು ಮಾಡಿದೆ. ತಮ್ಮ ತುಂಬು ಕುಟುಂಬವನ್ನು ಅಗಲಿದ್ದಾರೆ.
ಇವರ ಪಾರ್ಥಿವ ಶರೀರವನ್ನು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳು ಎಚ್ ಸಿ ಮಹದೇವಪ್ಪನವರು, ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್, ಆಯುಕ್ತರಾದ ರಾಕೇಶ್ ಕುಮಾರ್, ಜಂಟಿ ನಿರ್ದೇಶಕರಾದ ದೇವರಾಜ್ ಹಾಗೂ ಪುರುಷೋತ್ತಮ ಸಮಾಜ ಕಲ್ಯಾಣ ಇಲಾಖೆಯ ಡಿಸ್ಟಿಕ್ ಅಪಿಸರ್ ಲಕ್ಷ್ಮಣ್ ರೆಡ್ಡಿ ಅವರ ಜೊತೆಗೆ ದಲಿತ ಸಂಘರ್ಷ ಸಮಿತಿ ರಾಜ್ಯ ನಾಯಕರಾದ ಸಿದ್ಧಲಿಂಗಯ್ಯ, ಮಾವಳ್ಳಿ ಶಂಕರ್, ಆರ್ ಮೋಹನ್ ರಾಜ್, ಚಿ ನಾ ರಾಮು, ಸಿದ್ದಪ್ಪ ಜಿಕೆ ವಿಕೆ, ಕವಿಗಳಾದ ಸುಬ್ಬು ಹೊಳೆಯಾರ್, ಮತ್ತು ನಾಡಿನ ಎಲ್ಲಾ ಮುಖಂಡರು ಅಪಾರ ಸಂಖ್ಯೆಯ ಅಭಿಮಾನಿಗಳು ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.
ಅವರ ಹುಟ್ಟೂರಾದ ಹೊಸಕೋಟೆ ತಾಲ್ಲೂಕು ದಳಸಗೆರೆ ಗ್ರಾಮದಲ್ಲಿ ಬುದ್ಧ ದಮ್ಮದ ವಿಧಿ ವಿಧಾನದಂತೆ ಸಂಜೆ 4:30 ಕ್ಕೆ ಅಂತ್ಯ ಸಂಸ್ಕಾರ ನೆರವೇರಲಿದೆ.
