ಬೆಂಗಳೂರು: ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿರುವ ನಟಿ ರಶ್ಮಿಕ ಮಂದಣ್ಣ ಅವರು ಕನ್ನಡ ಚಿತ್ರರಂಗದಿಂದಲೇ ತಮ್ಮ ಸಿನಿಮಾ ಜೀವನವನ್ನು ಆರಂಭಿಸಿದ್ದು, ಇದೀಗ ದೇಶದಾದ್ಯಂತ ಹಲವಾರು ಭಾಷೆಗಳಲ್ಲಿ ನಟಿಸುತ್ತಿರುವ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಹಲವಾರು ಬ್ರಾಂಡ್ ಗಳಿಗೆ ಅಂಬಾಸಿಟರಾಗಿ ಹೊರಹೊಮ್ಮಿದ್ದಾರೆ.
ಈಗಾಗಲೇ ಹಲವಾರು ಬ್ರಾಂಡ್ಗಳಿಗೆ ಅಂಬಾಸಿಡರ್ ಆಗಿರುವ ಅವರು ಅಮೆರಿಕದ ಕ್ರಾಕ್ಸ್ ಅಂತಾರಾಷ್ಟ್ರೀಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಇದೀಗ ಹೊರಹೊಮ್ಮಿದ್ದಾರೆ.
ಕ್ರಾಕ್ಸ್ ಫೂಟ್ವೆರ್ನ ಬ್ರಾಂಡ್ ಅಂಬಾಸಿಡರ್ ಆಗಿರುವ ರಶ್ಮಿಕ ಮಂದಣ್ಣ ಅವರಿಗೆ ಕೇವಲ ಭಾರತ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರು ಇದೀಗ ಅಮೆರಿಕದಲ್ಲೂ ಕೂಡ ಮಿಂಚಲ್ಲಿದ್ದಾರೆ ಎಂದು ಅಭಿಮಾನಿಗಳು ಹರಸುತ್ತಿದ್ದಾರೆ. ಇದನ್ನೂ ಓದಿ: ಧನ್ಯಾ ರಾಮ್ ಕುಮಾರ್ ಪ್ರೀತಿಯಲ್ಲಿ ಬಿದ್ರಾ?
ಹೌದು, ರಶ್ಮಿಕಾ ಮಂದಣ್ಣ ಕಿರೀಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ಅಮೆರಿಕದ ಜನಪ್ರಿಯ ಫೂಟ್ವೆರ್, ಭಾರತ ಸೇರಿದಂತೆ ಎಲ್ಲೆಡೆ ಜನಪ್ರಿಯವಾಗಿರುವ ಕ್ರಾಕ್ಸ್ ಫೂಟ್ವೆರ್ನ ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಇದೀಗ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಕ್ರಾಕ್ಸ್ ಫೂಟ್ವೆರ್ ಬ್ರ್ಯಾಂಡ್ ಪ್ರಮೋಶನ್ ವಿಡಿಯೋಗಳು ಹೊರಬಂದಿದೆ. ಒಂದು ವಿಡಿಯೋವನ್ನು ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದ ಎಲ್ಲೆಡೆ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳಿದ್ದಾರೆ. ಇನ್ನು ಸ್ಟೈಲ್, ಪರ್ಸನಾಲಿಟಿ, ಆಕರ್ಷಣೆ ಸೇರಿದಂತೆ ಕ್ರಾಕ್ಸ್ ಬ್ರ್ಯಾಂಡ್ಗೆ ಪ್ರಮೋಶನ್ಗೆ ರಶ್ಮಿಕಾಗಿಂತ ಉತ್ತಮ ನಟಿ ಮತ್ತೊಬ್ಬರಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಅದೇನೆ ಆಗಲಿ ಕನ್ನಡದವರು ವಿಶ್ವಮಟ್ಟದಲ್ಲಿ ಮಿಂಚುತ್ತಿರುವುದಂತೂ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ ಯಾಗಿದೆ.
