Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬಸವೇಶ್ವರ ಪುತ್ಥಳಿ ಸ್ಥಾಪನೆ ಜಾತಿ ನಂಜು
  • Front news
  • State

ಬಸವೇಶ್ವರ ಪುತ್ಥಳಿ ಸ್ಥಾಪನೆ ಜಾತಿ ನಂಜು

admin April 29, 2025 1 minute read
Spread the love

ಶಹಾಪುರ: ನಗರದ ಬಸವೇಶ್ವರ ಪ್ರದೇಶದಲ್ಲಿನ ಗದ್ದೇರಾಯನ ದೇವಸ್ಥಾನದ ಮುಂದುಗಡೆ  ಬಸವೇಶ್ವರ ಪುತ್ಥಳಿ ಸ್ಥಾಪಿಸಲು (ಏ.30) ಬುಧವಾರ ಬಸವ ಸೇವಾ ಸಂಘ ಆಶ್ರಯದಲ್ಲಿ ಸಿದ್ಧಗೊಂಡಿದೆ. ಆದರೆ ಮೇಲ್ವರ್ಗದ ಸಮುದಾಯದ ಮುಖಂಡರನ್ನು ಮಾತ್ರ ಆಮಂತ್ರಣ ಪತ್ರಿಕೆ ಹೆಸರು ನಮೂದಿಸಿದ್ದಾರೆ. ಆದರೆ ಅಹಿಂದ ಸಮುದಾಯದ ಒಬ್ಬ ಮುಖಂಡರ ಹೆಸರು ನಮೂದಿಸದೆ ಇರುವುದು ಬಸವ ಸೇವಾ ಸಂಘ  ಜಾತಿ ನಂಜು ಹರಿಬಿಟ್ಟು ಅಪಚಾರ ಎಸಗಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾ ಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಶಾರದರಳ್ಳಿ ಆರೋಪಿಸಿದ್ದಾರೆ.

ಬಸವೇಶ್ವರ ನಗರದಲ್ಲಿ ಬ್ರಾಹ್ಮಣ, ವಾಲ್ಮೀಕಿ, ಕುರುಬ, ಕಬ್ಬಲಿಗ, ಮುಸ್ಲಿಮ್ ಸಮುದಾಯದವರು ವಾಸವಾಗಿದ್ದಾರೆ. ಅಲ್ಲದೆ ಬಸವ ಸೇವಾ ಸಂಘದ ಮುಖಂಡರು ಬಸವೇಶ್ವರ ಪುತ್ಥಳಿ ಖರೀದಿಸಲು ಅಹಿಂದ ಸಮುದಾಯದ ಮುಖಂಡರಿಂದ  ಹೆಚ್ಚಿನ ಧನ ಸಹಾಯವನ್ನು ಪಡೆದುಕೊಂಡಿದ್ದಾರೆ. ಆದರೆ ಪುತ್ಥಳಿ ಸ್ಥಾಪನೆಯ ಕಾರ್ಯಕ್ರಮದಲ್ಲಿ ಅಹಿಂದ ಸಮುದಾಯದ ಮುಖಂಡರನ್ನು ಕಡೆಗಣಿಸಿರುವುದು ಅತ್ಯಂತ ನಾಚಿಗೇಡು ಸಂಗತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತಿ ವಿನಾಶಕ್ಕೆ 12ನೇ ಶತಮಾನದಲ್ಲಿ ಕ್ರಾಂತಿಯ ಮೊಳಗಿಸಿದ ಮಾನವತಾವದಿ ಎಲ್ಲಾ ಜಾತಿ ಜನಾಂಗಗಳ ಶರಣು ಆಗಿದ್ದಾರೆ ಎಂಬ ಭಾವನೆಯನ್ನು ನಂಬಿಕೆ ಹಾಗೂ ವಿಶ್ವಾಸದಿಂದ ಅಹಿಂದ ಸಮುದಾಯದವರು ಸಂಭ್ರಮಿಸಿದ್ದೇವು. ಆದರೆ ಆಮಂತ್ರಣ ಪತ್ರಿಕೆಯಲ್ಲಿ ಮೇಲ್ವರ್ಗವನ್ನು ಆಹ್ವಾನಿಸಿರುವುದು ಬೇಸರ ಮೂಡಿಸಿದೆ ಎಂದು ಬಸವೇಶ್ವರ ಬಡಾವಣೆಯ ಅಹಿಂದ ಮುಖಂಡರು ನೋವು ತೋಡಿಕೊಂಡಿದ್ದಾರೆ.

ಎಲ್ಲಾ ಸಮುದಾಯ ಒಳಗೊಂಡು ಪುತ್ಥಳಿ ಸ್ಥಾಪಿಸಲಿದ್ದೇವೆ. ಸಣ್ಣಪುಟ್ಟ ತಪ್ಪು ಆಗಿದೆ. ಮುಂದೆ ಇಂತಹ ಪ್ರಮಾದ  ಆಗದಂತೆ ಎಚ್ಚರವಹಿಸಲಾಗುವುದು ಎಂದು ಬಸವ ಸೇವಾ ಸಂಘ ಗೌರವ ಅಧ್ಯಕ್ಷರಾದ ಚೆನ್ನಪ್ಪಗೌಡ ಶಿರವಾಳ ತಿಳಿಸಿದ್ದಾರೆ.

 

About the Author

admin

Administrator

Visit Website View All Posts

Spread the love

Post navigation

Previous: ಬಿಜೆಪಿಯವರ ಗೊಡ್ಡು ಬೆದರಿಕೆಗೆ ಕಾಂಗ್ರೆಸಿಗರು ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ್
Next: ಉಗ್ರರ ಸೊಕ್ಕಡಗಿಸಲು ಸಶಸ್ತ್ರ ಪಡೆಗಳಿಗೆ ಸ್ವಾತಂತ್ರ್ಯ ನೀಡಿದ ಪ್ರಧಾನಿ

Views:

15

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.