ಬೆಂಗಳೂರು: ಶನಿವಾರ ಇಂದು ಭರತ್ ಭೂಷಣ್ ರವರ ನಿವಾಸಕ್ಕೆ ಕಂಪನಿಯ ಅಧ್ಯಕ್ಷರಾದ ಎಸ್.ಮನೋಹರ್ ರವರು , ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಡಿ ಪದ್ಮಾವತಿ ಹಾಗೂ ಅಧಿಕಾರಿಗಳು ತೆರಳಿ ಭರತ್ ಭೂಷಣ ರವರ ಧರ್ಮಪತ್ನಿಯಾದ ಶ್ರೀಮತಿ ಸುಜಾತ ರವರಿಗೆ ಒಂದು ಲಕ್ಷ ರೂಪಾಯಿ ಅರ್ಥಿಕ ಸಹಾಯವನ್ನು ಸಂಸ್ಥೆ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಭರತ್ ಭೂಷಣ್ ಅವರ ಧರ್ಮಪತ್ನಿ ಹಾಗೂ ಅವರ ಮಗು ಹಾಗೂ ಭರತ್ ಭೂಷಣ್ ರವರ ತಂದೆಯನ್ನ ಭೇಟಿ ಮಾಡಿ ಅವರಿಗೆ ಆತ್ಮಸ್ಥೈರ್ಯವನ್ನು ತುಂಬಲಾಯಿತು.
ಕಾಶ್ಮೀರದಲ್ಲಿ ನಡೆದ ಅತ್ಯಂತ ಹೇಯ ಕೃತ್ಯವನ್ನು ಈ ಸಂದರ್ಭದಲ್ಲಿ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉಗ್ರಗಾಮಿಗಳನ್ನ ಸದೆ ಬಡಿಯುವಂತೆ ಒತ್ತಾಯಿಸಲಾಯಿತು.
ಶ್ರೀಮತಿ ಸುಜಾತ ರವರು ಕಾಶ್ಮೀರದ ಆ ಸಂದರ್ಭದಲ್ಲಿ ಅತ್ಯಂತ ಧೈರ್ಯದಿಂದ ಉಗ್ರಗಾಮಿಗಳ ಬೆದರಿಕೆಯನ್ನು ದಿಟ್ಟತನದಿಂದ ಎದುರಿಸಿ ಮಗುವನ್ನು ಅತ್ಯಂತ ಸುರಕ್ಷತೆಯಿಂದ ಕರೆ ತಂದಿರುವ ಅವರ ಧೈರ್ಯವನ್ನು ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಗ್ರಗಾಮಿಗಳ ಗುಂಡಿಗೆ ಬಲಿಯಾದಂತಹ ಮುಗ್ಧರ ಆತ್ಮಕ್ಕೆ ಶಾಂತಿಯನ್ನ ಕೋರಿದರು. ಉಗ್ರಗಾಮಿಗಳನ್ನ ಸದೆ ಬಡಿಯಬೇಕೆಂದು ಎಲ್ಲರೂ ಒಕ್ಕೊರಲಿಂದ ಇರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳಾದ ಶ್ರೀ ಶರಣಪ್ಪ ಶ್ರೀ ತಿಮ್ಮಣ್ಣ ಶ್ರೀ ಸಂತೋಷ್ ಹಾಗೂ ಶ್ರೀಮತಿ ಕೀರ್ತಿ ಹಾಗೂ ರೇಖಾ ರವರು ಉಪಸ್ಥಿತರಿದ್ದರು.
