ಬೆಂಗಳೂರು: ಭಾರತದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಇಂದು (ಶುಕ್ರವಾರ ಏ. 18) ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯಾದರೂ ಬೆಂಗಳೂರು ಕಪ್ ಗೆಲ್ಲುತ್ತಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರ್ಸಿಬಿ ಈ ಬಾರಿ ಉತ್ತಮ ಆಟ ಆಡುತ್ತಿದೆ ಆದರೆ ಈ ಬಾರಿ ಕಪ್ ನಮ್ದೇ ಎನ್ನಬೇಡಿ, ಕಪ್ ನಮ್ದೇ ಎಂದಾಗೆಲ್ಲ ನಾವು ಕಪ್ ಗೆದೆಯಲು ಆಗಿಲ್ಲ ಹಾಗಾಗಿ ಈ ಸಲ ಕಪ್ ನಮ್ದೇ ಏನ್ಬೇಡಿ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್ ಗೆ ಸೋಲಿಸಿದ ಟೀಮ್ ಇಂಡಿಯಾ
ಕಳೆದ 18 ವರ್ಷಗಳಿಂದ ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿದ್ದು ನಾನು ಆರ್ಸಿಬಿಯಲ್ಲೂ ಆಡಿದ್ದೇನೆ ಮತ್ತು ಪಂಜಾಬ್ ಟೀಮ್ನಲ್ಲೂ ಆಡಿದ್ದೇನೆ ಹಾಗಾಗಿ ಎರಡು ಟೀಮ್ಗಳಿಗೂ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದಿದ್ದಾರೆ.
