ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರು ಸದಸ್ಯರ ಗಮನಕ್ಕೆ ಯಾವುದೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು 16ಜನ ಸದಸ್ಯರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದರ ಹಿನ್ನಲೆ ಏ. 16ರಂದು ಸಾಮಾನ್ಯ ಸಭೆ ಕರೆಯಲಾಗಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಮಂಡನೆ ಆದರೂ ಕೂಡಾ ಪುರಸಭೆ ಮುಖ್ಯಾಧಿಕಾರಿ ಎಸ್ ರಾಜಶೇಖರ ಅವರು ತಡವಾಗಿ ಪ್ರಕಟಿಸಿದ್ದು ಜನರಲ್ಲಿ ಗೊಂದಲ ಸೃಷ್ಟಿಸಿದೆ.
ಪುರಸಭೆ ಮುಖ್ಯಾಧಿಕಾರಿ ಎಸ್ ರಾಜಶೇಖರ ಮಾಧ್ಯಮದವರೊಂದಿಗೆ ಮಾತನಾಡಿ, ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಕುರಿತು ಸಾಮಾನ್ಯ ಸಭೆ ಕರೆಯುವಂತೆ ಕಲಬುರ್ಗಿ ಹೈಕೋರ್ಟ್ 2ನೇ ಬೆಂಚ್ ನ್ಯಾಯಾದೀಶರ ಆದೇಶದ ಮೇರೆಗೆ 16ರಂದು ಸಭೆ ಕರೆಯಲಾಗಿತ್ತು. ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ವಿರುದ್ಧ 15 ಮತಗಳು ಪರವಾಗಿ 5 ಮತಗಳು ಬಿದ್ದು ಅವಿಶ್ವಾಸ ನಿರ್ಣಯವಾಗಿದೆ ಹಂಗಾಮಿ ಅಧ್ಯಕ್ಷರಾಗಿ ಹಣಮಂತ ಸುಣಗಾರ, ನೇಮಕವಾಗಿದ್ದಾರೆ. ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿರುದರಿಂದ ಘೋಷಣೆ ಮಾಡಲು ವಿಳಂಬವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಯಾವ ಮುಖ ಇಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ಮಾತಾಡುತ್ತಿದೆ?: ಸಿಎಂ
ಈ ಸಂದರ್ಭದಲ್ಲಿ ಹಂಗಾಮಿ ಅಧ್ಯಕ್ಷರಾಗಿ ನೇಮಕವಾದ ಹಣಮಂತ ಸುಣಗಾರ, ಸದಸ್ಯರಾದ ಭಾಷಸಾಬ ತಾಂಬೋಳಿ, ಗೊಲ್ಲಾಳ ಬಂಕಲಗಿ, ಸದಸ್ಯರ ಪ್ರತಿನಿಧಿಗಳಾದ ಶರಣಪ್ಪ ಸುಲ್ಪಿ, ಸೈಪನ ನಾಟಿಕಾರ ಇದ್ದರು.
