ಶಹಾಪುರ: ನಗರಸಭೆ ಅಭಿವೃದ್ದಿ ಹೆಸರಲ್ಲಿ ಪ್ರತಿವರ್ಷ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ ಆದರೆ ಸರ್ಕಾರಕ್ಕೆ ಇಲಾಖೆ ಸಲ್ಲಿಸುವ ಲೆಕ್ಕಾಚಾರದ ವರದಿಯಲ್ಲಿ ಅಶಿಸ್ತು ಕಂಡು ಬರುತ್ತಿದ್ದು, ತೆರಿಗೆ ಹಣದಲ್ಲಿ ಗೋಲ್ಮಾಲ್ ನಡೆದಿದೆ ಎನ್ನುವ ಅನುಮಾನ ಮೂಡಿದ್ದು, ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹೊನ್ನಪ್ಪ ಗಂಗನಾಳ ಆಗ್ರಹಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ನಗರಸಭೆಗೆ ೪ ಕೋಟಿ 62 ಲಕ್ಷ ರೂ, ತೆರಿಗೆ ಪಾವತಿಯಾಗಿದೆ. ಎಂದಿಗಿಂತಲೂ ಈ ವರ್ಷ ಹೆಚ್ಚು ತೆರಿಗೆ ಬಂದಿದೆ. ಜೇಸ್ಕಾಂ ಕ್ವಾರ್ಟಸ್‌ಗೆ 52 ಲಕ್ಷ ರೂ, ತಾಪಂ, ಕೆಕೆಆರ್‌ಟಿಸಿ, ಅಗ್ನಿಶಾಮಕ ಸೇರಿ ಇನ್ನಿತರ ಸರ್ಕಾರಿ ಕಟ್ಟಡದಿಂದ ಕೋಟ್ಯಾಂತರ ರೂ. ತೆರಿಗೆ ಹಣ ವಸೂಲಾಗಿದೆ.71 ಲಕ್ಷ.52 ಸಾವಿರ ರೂ, ಸರ್ಕಾರಿ ಕಟ್ಟಡಗಳಿಂದ ತೆರಿಗೆ ವಸೂಲಾಗಿದೆ. ಇದರಲ್ಲಿ ಉಳಿದಿದ್ದೆಲ್ಲಾ, ಖಾಸಗಿಯಿಂದ ತೆರಿಗೆ ವಸೂಲಾಗಿದೆ. ಇದನ್ನೂ ಓದಿ: ಮಾಪಣ್ಣ ಕೊಲೆ ಪ್ರಕರಣ; ಮತ್ತಿಬ್ಬರು ಆರೋಪಿಗಳ ಬಂಧನ
ಪೌರಾಯುಕ್ತರು ನಿಯಮ ಉಲ್ಲಂಘಿಸಿ ಆರ್ಥಿಕ ಅಪರಾಧ ಎಸಗಿರುವ ಅನುಮಾನಗಳಿದ್ದು ಈ ಕುರಿತು ತನಿಖೆ ಆಗಬೇಕು. ತೆರಿಗೆ ವಿಷಯದಲ್ಲಿ ಹಗರಣದ ಸುಳಿವು ನೀಡುತ್ತಿದೆ. ಅಕ್ರಮ ಮುಚ್ಚುವ ಪ್ರಯತ್ನಗಳು ಆಡಳಿತದಲ್ಲಿ ಸದ್ದಿಲ್ಲದೆ ನಡೆದಂತಿದೆ. ಸಾರ್ವಜನಿಕ ಪಾರದರ್ಶಕ ಅಧಿನಿಯಮ ಉಲ್ಲಂಘನೆ, ಆರ್ಥಿಕ ಅಶಿಸ್ತು ಕೋಟ್ಯಂತರ ರೂ. ತೆರಿಗೆ ರೂಪದಲ್ಲಿ ಬಂದ ಹಣವನ್ನು ನಗರಸಭೆಯವರು ಪಾಲುದಾರರಾಗಿ ನುಂಗಿ ನೀರು ಕುಡಿದಿದ್ದಾರೆ. ಈ ಬಗ್ಗೆ ಸೂಕ್ತವಾಗಿ ತನಿಖೆ ಆಗಬೇಕು. ಮತ್ತು ತೆರಿಗೆ ವಂಚಿಸಿದವರ ಬಳಿ ಬಡ್ಡಿ ಸಮೆತ ತೆರಿಗೆ ಸಂಗ್ರಹ ಮಾಡಬೇಕು.
ಸ್ಥಿರಾಸ್ತಿ ದಸ್ತಾವೇಜು ನೋಂದಣಿ ಅಥವಾ ಆಸ್ತಿ ನೋಂದಣಿಗೆ ಸರ್ಕಾರ ಇ-ಖಾತಾ ಕಡ್ಡಾಯಗೊಳಿಸಿದೆ. ಆದ್ದರಿಂದ ಸಾರ್ವಜನಿಕರು ಇವುಗಳನ್ನು ಪಡೆಯುವ ಭರದಲ್ಲಿ ಅಧಿಕಾರಿಗಳಿಗೆ ಲಂಚ ನೀಡಿ ಅನಿವಾರ್ಯವಾಗಿ ಪಡೆದು ಕೊಳ್ಳಬೇಕಾದ ಪರಿಸ್ಥಿತಿ ನಗರ ಜನತೆಗೆ ಎದುರಾಗಿದೆ.
ನಿವೇಶನ ಹಾಗೂ ಅದರಲ್ಲಿ ಮನೆ ನಿರ್ಮಿಸಿದವರಿಗೆ ಇ-ಖಾತಾ ಇಲ್ಲದೇ ಮಾಲೀಕತ್ವ ಸಾಬೀತು ಪಡಿಸಿಕೊಳ್ಳಲು. ಹಣ ನೀಡಿಯಾದರೆ ಇ-ಖಾತಾ ಪಡೆಯುವುದು ಅನಿವಾರ್ಯವಾಗಿದೆ. ಮತ್ತು ನಗರಸಭೆಯಲ್ಲಿನ ವಸ್ತುಗಳ ಖರೀದಿಗೆ ಕೊಟ್ಯಾಂತರ ಹಣದ ಖರ್ಚು ಹಾಕುತ್ತಾರೆ. ಆದರೆ ಸರಿಯಾಗಿ ನಿರ್ವಹಿಸುವ ಒಂದೂ ಕಂಪ್ಯೂಟರ್ ವ್ಯವಸ್ಥೆಯಿಲ್ಲಾ. ಇದರಿಂದ ಸಿಬ್ಬಂದಿಗಳು ಸಹ ರೋಸಿ ಹೋಗಿದ್ದಾರೆ.
ಲಂಚ ನೀಡಿದರೆ ಪಟಾಪಟ್ ಕೆಲಸ ಮಾಡಿಕೊಡುವ ಸಿಬ್ಬಂದಿಗಳು, ಹಣ ಕೊಡದಿದ್ದರೇ ಸುಖ ಸುಮ್ಮನೇ ಕಛೇರಿಗೆ ಅಲೆದಾಡಿಸುತ್ತಾರೆ. ಒಬ್ಬರ ಹೆಸರಲ್ಲಿ ನಗರಸಭೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಇ-ಖಾತಾ ನೀಡಿ ಸರ್ಕಾರಕ್ಕೆ ಸೇರಬೇಕಾದ ಕೋಟ್ಯಾಂತರ ರೂ. ಹಣವನ್ನು ಸರ್ಕಾರಕ್ಕೆ ತಲುಪಿಸದೇ ವಂಚಿಸುತ್ತಿದ್ದಾರೆ.
ಖಾತಾ ನಕಲು, ಪಿಐಡಿ ಸೃಷ್ಠಿಸಿ ಹಾಗೂ ಮೊತ್ತೊಂದು ಖಾತಾ ನಕಲು ಬೆರೆಯವರ ಹೆಸರಿನಲ್ಲಿ ಪಿಐಡಿ ಸೃಷ್ಠಿಸಿ ಕಾನೂನು ಬಾಹಿರವಾಗಿ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ.
ಮತ್ತು ನಗರಸಭೆ ಕಚೇರಿಯಲ್ಲಿ ಪೌರಾಯುಕ್ತರು, ಭೂ ದಾಖಲೆಗಳು, ತೆರಿಗೆ ಹಣ ಪಾವತಿ ಸಿಬ್ಬಂದಿಗಳು ಗೂಗಲ್‌ಪೇ, ಪೋನ್‌ಪೇನಂತಹ ಯುಪಿಐ ಹ್ಯಾಪ್ ಗಳ ಮೂಲಕ ಲಂಚ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿಬರುತ್ತಿವೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ವಂಚಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಆಗ್ರಹಿಸಿದ್ದಾರೆ.
