ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆಯನ್ನು ಖಂಡಿಸಿ, ಬಿಜೆಪಿ ಪಕ್ಷವು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸತತವಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಈಗಾಗಲೇ ಹಲವು ಧರಣಿಗಳನ್ನು ಮಾಡಿದೆ.
ಇನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆ ಮತ್ತು ಲೂಟಿ ಮಾಡೋದೇ ಕಾಂಗ್ರೆಸ್ ಸರ್ಕಾರದ ಸ್ಟೈಲ್ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಂತ ಪುಣ್ಯಾತ್ಮರು ಕಸದಿಂದ ರಸ ತೆಗೆದು ಲೂಟಿ ಮಾಡುತ್ತಿದ್ದಾರೆ. ಗಾರ್ಬೆಜ್ ಸೆಸ್ ಮೂರು ಪಟ್ಟು ಮಾಡಿದ್ದಾರೆ. ಖಾಲಿ ಸೈಟಿನಲ್ಲಿ ಕಸ ಬೀಳುತ್ತೋ ಇಲ್ವೋ ಆದರೆ ಬಿಬಿಎಂಪಿ ಸೆಸ್ ಮಾತ್ರ ಬೀಳುತ್ತದೆ. ಇದನ್ನೂ ಓದಿ: ಭೋವಿ ನಿಗಮದಲ್ಲಿ ಬಹುದೊಡ್ಡ ಹಗರಣ!
ಬೆಲೆ ಏರಿಕೆ, ಲೂಟಿ ಮಾಡುವುದೇ ಕಾಂಗ್ರೆಸ್ನ ಸ್ಟೈಲ್. ಇದು ಕಳೆದ 60 ವರ್ಷಗಳಿಂದ ಕಾಂಗ್ರೆಸ್ನ ಚಾಳಿಯಾಗಿದೆ. ಈಗಲೂ ಸರ್ಕಾರ ಅದೇ ಚಾಳಿಯನ್ನು ಮುಂದುವರೆಸಿದೆ ಕಿಡಿಕಾರಿದರು. ಸರ್ಕಾರ ಪ್ರತೀ ತಿಂಗಳು ಒಂದೊಂದು ಬೆಲೆ ಏರಿಕೆ ಮಾಡುತ್ತಿದೆ. ಪ್ರತೀ ತಿಂಗಳು ಒಂದೊಂದು ಬೆಲೆ ಏರಿಕೆ ಮಾಡುವುದು ಈ ಸರ್ಕಾರದ ಕಾಮನ್ ಅಜೆಂಡಾ ಆಗಿದೆ. ಬೆಲೆ ಏರಿಕೆ, ರೈತರಿಗೆ ಅನ್ಯಾಯ, ಮುಸ್ಲಿಂ ಓಲೈಕೆ, ಭ್ರಷ್ಟಾಚಾರ, ದಲಿತರ ಹಣ ದುರ್ಬಳಕೆ ವಿರುದ್ಧ ನಾವು ಜನಾಂದೋಲನ ಮಾಡುತ್ತಿದ್ದೇವೆ ಎಂದರು.
