ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ.ಗೋಪಾಲಯ್ಯರವರು 2009 ರಲ್ಲಿ ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ (ರಿ.) ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯು ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಬಡಜನರಿಗೆ ಸೇವೆ ಸಲ್ಲಿಸುತ್ತಾ ಬಂದಿದೆ.
9ನೇ ಸೆಪ್ಟೆಂಬರ್ 2022 ರಂದು ಘನತೆವೆತ್ತ ರಾಷ್ಟ್ರಪತಿಗಳು “ಪ್ರಧಾನಮಂತ್ರಿ ಟಿ.ಬಿ. ಮುಕ್ತ ಭಾರತ್ ಅಭಿಯಾನ”ವನ್ನು ಘೋಷಿಸಿದರು. ನೆಚ್ಚಿನ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀರವರು ಈ ಅಭಿಯಾನದ ಮೂಲಕ ಕ್ಷಯರೋಗವನ್ನು ಭಾರತದಿಂದ ಕಿತ್ತೊಗೆಯುವ ಕುರಿತು “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು.
ಶಾಸಕರಾದ ಶ್ರೀ ಕೆ.ಗೋಪಾಲಯ್ಯ ಮತ್ತು ಬಿಬಿಎಂಪಿ ಮಾಜಿ ಉಪಮಹಾಪೌರರಾದ ಶ್ರೀಮತಿ ಹೇಮಲತಾ ಗೋಪಾಲಯ್ಯರವರು ಮಾನ್ಯ ಪ್ರಧಾನಮಂತ್ರಿಗಳ ಮಾತನ್ನು ಕೇಳಿ ಉತ್ತೇಜಿತರಾಗಿ ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ಮೂಲಕ ಈ ಅಭಿಯಾನವನ್ನು ಕೈಗೊಳ್ಳಲು ನಿರ್ಧರಿಸಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನವಾದ 2ನೇ ಅಕ್ಟೋಬರ್ 2022 ರಂದು ಅರೋಗ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಉಚಿತವಾಗಿ “ನ್ಯೂಟ್ರಿಷನಲ್ ಫುಡ್ ಕಿಟ್” ನೀಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.
ಅಲ್ಲಿಂದ ಇಲ್ಲಿಯವರೆಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಪ್ರತಿ ತಿಂಗಳು ಸತತವಾಗಿ ಸುಮಾರು 140 ರಿಂದ 160 ಜನ ಟಿ.ಬಿ.ಸೋಂಕಿತರಿಗೆ ಟಿ.ಬಿ.ಔಷಧಿಗಳ ಜೊತೆಗೆ “ನ್ಯೂಟ್ರಿಷನಲ್ ಫುಡ್ ಕಿಟ್” ನೀಡಲಾಗುತ್ತಿದೆ. ಒಬ್ಬ ರೋಗಿಯು ಕನಿಷ್ಠ 7 ತಿಂಗಳ ಕಾಲ ಔಷಧಿಯ ಜೊತೆಗೆ ನ್ಯೂಟ್ರಿಷನಲ್ ಫುಡ್ ಕಿಟ್ ತೆಗೆದುಕೊಂಡರೆ ಮಾತ್ರ ಖಾಯಿಲೆಯು ಗುಣವಾಗುತ್ತದೆ. ಹಳೆ ರೋಗಿಗಳಿಗೆ ಖಾಯಿಲೆಯು ವಾಸಿಯಾದಂತೆಲ್ಲ ಹೊಸ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ. ಕಳೆದ 30 ತಿಂಗಳಿನಿಂದ ಇಲ್ಲಿಯವರೆಗೆ 799 ಜನರಿಗೆ ಖಾಯಿಲೆಯು ಸಂಪೂರ್ಣ ಗುಣವಾಗಿರುವುದು ಸಂತಸದ ವಿಷಯವಾಗಿದೆ. ಶ್ರೀ ನರೇಂದ್ರ ಮೋದಿ ಜೀಯವರ ಆಶಯಕ್ಕೆ ಇದು ಒಂದು ಸಣ್ಣ ಕಾಣಿಕೆಯಾಗಿದೆ. ಈ ತಿಂಗಳು 204 ಜನ ನ್ಯೂಟ್ರಿಷನಲ್ ಫುಡ್ ಕಿಟ್ ಪಡೆಯುತ್ತಿದ್ದಾರೆ.
ಶ್ರೀಮತಿ ಹೇಮಲತಾ ಗೋಪಾಲಯ್ಯ ಹಾಗೂ ಶ್ರೀ ಕೆ.ಗೋಪಾಲಯ್ಯರವರ ಈ ನಿಸ್ವಾರ್ಥ ಸೇವೆಯನ್ನು ಮನಗಂಡ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ ರವರು 2023ರಲ್ಲಿ ಇವರಿಗೆ “ನಿ-ಕ್ಷಯ ಮಿತ್ರ” ಗೌರವ ಪಾರಿತೋಷಕವನ್ನು ನೀಡಿ ಸನ್ಮಾನಿಸಿರುತ್ತಾರೆ.
ನಮ್ಮ ರಾಷ್ಟ್ರವನ್ನು ಟಿ.ಬಿ. ಮುಕ್ತಗೊಳಿಸಲು ಕರೆ ನೀಡಿ ಪ್ರೋತ್ಸಾಹವನ್ನು ತುಂಬುತ್ತಿರುವ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀರವರಿಗೆ ಶ್ರೀ ಕೆ.ಗೋಪಾಲಯ್ಯ, ಶ್ರೀಮತಿ ಹೇಮಲತಾ ಗೋಪಾಲಯ್ಯರವರು ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ (ರಿ.) ಸಂಸ್ಥೆಯ ಮೂಲಕ ಹೃತ್ಪೂರ್ವಕ ಅಭಿನಂದನೆಗಳು.
ಈ ಅಭಿಯಾನ ಯಶಸ್ವಿಯಾಗಲು ಸಹಕಾರ ನೀಡಿದ ಟ್ರಸ್ಟಿನ ಎಲ್ಲ ಪದಾಧಿಕಾರಿಗಳು, ಅತ್ಯಂತ ಶ್ರಮ ವಹಿಸುತ್ತಿರುವ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮತ್ತು ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಈ ಅಭಿಯಾನವನ್ನು ಗುರುತಿಸಿ ತಮ್ಮ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲು ಅವಕಾಶ ನೀಡಿರುವ ಶ್ರೀ ನರೇಂದ್ರ ಮೋದಿ ಜೀ ರವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಧನ್ಯವಾದಗಳು.
ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಟಿಪಿ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು ಈ ಸಂದರ್ಭದಲ್ಲಿ ಮಾಜಿ ಶಾಸಕ ನೆ ಲ ನರೇಂದ್ರಬಾಬು ನಗರ ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಹರೀಶ್, ರಾಜೀವ್ ಟ್ರಸ್ಟ್ ನ ಅಧ್ಯಕ್ಷ ಜಯರಾಮಯ್ಯ ಡಾ ಮಂಜುನಾಥ್ ಗೌಡ ಬಿಬಿಎಂಪಿ ವೈದ್ಯಾಧಿಕಾರಿಗಳು ಸೇರಿದಂತೆ ಹಲವಾರು ಮುಖಂಡರುಗಳು ಪಾಲ್ಗೊಂಡಿದ್ದರು.
