ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಹನಿಟ್ರ್ಯಾಪ್ ನ ಹಿಂದೆ ಇರುವವರು ಯಾರು ಎಂಬ ಬಗ್ಗೆ ಇನ್ನೂ ಕೂಡ ನಿಗೂಢವಾಗಿದೆ. ಆದರೆ ಇದೀಗ ಸಚಿವ ಕೆಎನ್ ರಾಜಣ್ಣ ಅವರು ಹನಿಟ್ರ್ಯಾಪ್ ಮಾಡಲು ಬಂದ ಯುವತಿಯ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಹೌದು, ಕರ್ನಾಟಕ ರಾಜ್ಯದಾದ್ಯಂತ ಬಾರಿ ಗ್ರಾಸವಾಗಿ ಚರ್ಚೆಯಾಗುತ್ತಿರುವ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜಣ್ಣ ಅವರು ಸುಳಿವು ಕೊಟ್ಟಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬ್ಲೂ ಟಾಪ್ ಹಾಕಿಕೊಂಡು, ‘ಪರ್ಸನಲ್ ಆಗಿ ಮಾತನಾಡ್ಬೇಕು’ ಎಂದು 2 ಬಾರಿ ಹನಿಟ್ರ್ಯಾಪ್ಗೆ ಯತ್ನಿಸಿದ್ದರು. ಇದರ ಹಿಂದೆ ಇರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ಸ್ಫೋಟಕ ಮಾಹಿತಿ ಹೊರಹಾಕಿದ ಸಚಿವ ಸತೀಶ್ ಜಾರಕಿಹೊಳಿ!
ನನ್ನ ಭೇಟಿ ಮಾಡಲು ಬಂದ ನಮ್ಮ ಬೆಂಗಳೂರಿನ ಮನೆಯಲ್ಲಿ ಸಿಸಿಟಿವಿ ಇರಲಿಲ್ಲ, ಅಲ್ಲಿ ಏನಾದ್ರು ಸಿಸಿಟಿವಿ ಇದ್ದಿದ್ದರೆ ಆ ಹುಡುಗಿ ಯಾರು ಎಂದು ನಾವು ಕಂಡುಹಿಡಿಯಬಹುದು ಎಂದಿದ್ದಾರೆ.
ಇನ್ನೂ ಸದನದಲ್ಲಿ ಪ್ರಸ್ತಾಪ ಆಗಿ ಇಷ್ಟು ದಿನಾವದರೂ ರಾಜಣ್ಣ ದೂರು ದಾಖಲಿಸದೇ ಇರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದೀಗ ಸಚಿವ ಅವರೇ, ದೂರು ಕೊಡುತ್ತೇನೆ ಎಂದಿದ್ದಾರೆ. ಗೃಹ ಸಚಿವ ಪರಮೇಶ್ವರ್ ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ ಎಂದಿದ್ದಾರೆ.
