ನಟಿ ತಮನ್ನಾ ಭಾಟಿಯಾ ಅವರು ತಮ್ಮದೇ ಆದ ವಿಶೇಷ ಸ್ಟೈಲಿನಲ್ಲಿ ನಟಿಸುವ ಮೂಲಕ ಇಡೀ ದೇಶದಾದ್ಯಂತ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿರುವ ಅವರು ಶೀಘ್ರದಲ್ಲೇ ‘ಒಡೆಲ್ಲಾ 2′ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುರಿತಾಗಿ ಚಿತ್ರತಂಡವು ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಇತ್ತೀಚಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಟ ತಮನ್ನಾ ಅವರು ಪತ್ರಕರ್ತರೊಬ್ಬರ ಮೇಲೆ ಸಿಟ್ಟಾಗಿದ್ದಾರೆ ಎಂಬ ಮಾಹಿತಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ.
ಹೌದು, ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತರೊಬ್ಬರು ನಟಿ ತಮನ್ನಾ ಅವರಿಗೆ ಮಿಲ್ಕ್ ಬ್ಯೂಟಿ ಎಂಬ ಪ್ರಶ್ನೆಗೆ ತಮನ್ನಾ ಅವರು ಸಿಟ್ಟಿಗೆದ್ದಿದ್ದರೆ ಎಂಬ ಮಾಹಿತಿ ತಿಳಿದು ಬಂದಿದೆ.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯೊಬ್ಬರು ನಿರ್ದೇಶಕ ಅಶೋಕ್ ತೇಜ ಅವರನ್ನು ‘ಶಿವಶಕ್ತಿ ಪಾತ್ರಕ್ಕೆ ನೀವು ಮಿಲ್ಕಿ ಬ್ಯೂಟಿ ಅವರನ್ನು ಏಕೆ ಆಯ್ಕೆ ಮಾಡಿಕೊಂಡಿದ್ದೀರಿ?’ ಎಂದು ಕೇಳಿದರು. ತಮನ್ನಾಗೆ ಈ ಪ್ರಶ್ನೆ ಇಷ್ಟವಾಗಲಿಲ್ಲ ಮತ್ತು ನಿರ್ದೇಶಕರ ಬದಲಿಗೆ ಅವರೇ ಮೊದಲು ಉತ್ತರಿಸಿದರು.
‘ಉತ್ತರ ನಿಮ್ಮ ಪ್ರಶ್ನೆಯಲ್ಲಿದೆ. ಅವರು ಹಾಲಿನ ಸೌಂದರ್ಯವನ್ನು ನಾಚಿಕೆಪಡುವ ವಿಷಯವೆಂದು ನೋಡುವುದಿಲ್ಲ. ಮಹಿಳೆಗೆ ಗ್ಲಾಮರ್ ಇರುವುದು ಒಳ್ಳೆಯದು. ಅದಕ್ಕಾಗಿ, ನಾವು ಮಹಿಳೆಯರು ನಮ್ಮನ್ನು ನಾವು ಮೆಚ್ಚಿಕೊಳ್ಳಬೇಕು. ಆಗ ಮಾತ್ರ ನಾವು ಇತರರಿಂದ ಗೌರವ ಮತ್ತು ಮೆಚ್ಚುಗೆಯನ್ನು ನಿರೀಕ್ಷಿಸಬಹುದು. ನಾವು ನಮ್ಮನ್ನು ಗೌರವಿಸದಿದ್ದರೆ, ಬೇರೆ ಯಾರೂ ನಮಗಾಗಿ ಅದನ್ನು ಮಾಡುವುದಿಲ್ಲ’ ಎಂದು ತಮನ್ನಾ ಸ್ಪಷ್ಟವಾಗಿ ಉತ್ತರಿಸಿದರು.
‘ಇಲ್ಲಿ ಒಬ್ಬ ಅದ್ಭುತ ಸಂಭಾವಿತ ವ್ಯಕ್ತಿ ಇದ್ದಾರೆ, ಅವರು ಮಹಿಳೆಯರನ್ನು ಆ ರೀತಿ ನೋಡುವುದಿಲ್ಲ. ಅವರು ಮಹಿಳೆಯರನ್ನು ದೈವಿಕ ದೃಷ್ಟಿಕೋನದಿಂದ ನೋಡುತ್ತಾರೆ. ಮಹಿಳೆಯರಲ್ಲಿರುವ ಈ ದೈವಿಕ ಶಕ್ತಿಯು ಮೋಹಕ, ಮಾರಕ ಮತ್ತು ಶಕ್ತಿಶಾಲಿಯಾಗಿರಬಹುದು’ ಎಂದರು ತಮನ್ನಾ. ತಮನ್ನಾಗೆ ಮೊದಲಿನಿಂದಲೂ ಮಿಲ್ಕಿ ಬ್ಯೂಟಿ ಎಂದು ಕರೆದರೆ ಇಷ್ಟ ಆಗುವುದಿಲ್ಲ. ಹಾಗೆ ಕರೆಯಬೇಡಿ ಎಂದು ಅವರು ಹೇಳಿದ್ದಾರೆ.
