ಬೆಂಗಳೂರು: ಹೊರ ರಾಜ್ಯಗಳು ಕನ್ನಡಿಗರ ಮೇಲೆ ದೌರ್ಜನ್ಯ, ಅಟ್ಟಹಾಸ ಮೆರೆಯುತ್ತಿರುವುದರಿಂದ ಇಂದು (ಶನಿವಾರ ಮಾ. 22) ರಂದು ಕರ್ನಾಟಕ ರಾಜ್ಯದಾದ್ಯಂತ ಅಖಂಡ ಕರ್ನಾಟಕ ಸಂಘಟನೆಯಿಂದ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಈ ಬಂದ್ ಗೆ ಅತ್ಯುತ್ತಮ ಬೆಂಬಲ ಸಿಕ್ಕಿದೆ.
ಹೌದು, ಪರ ರಾಜ್ಯದವರು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದರಿಂದ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಪ್ರತಿಯೊಂದು ಜಿಲ್ಲೆಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿತು ವಾಟಾಳ್ ನಾಗರಾಜ್ ಅವರ ಬಂದಿಗೆ ಅತ್ಯುತ್ತಮ ಬೆಂಬಲ ಸಿಕ್ಕಂತಾಗಿದೆ. ಇದನ್ನೂ ಓದಿ: ಪ್ರೆಸ್ ಕ್ಲಬ್ ಡೈರಿ ಬಿಡುಗಡೆ
ಇನ್ನು BMTC-KSRTC ನೌಕರರ ಸಂಘ, ಲಾರಿ ಚಾಲಕರ ಸಂಘ, ಮದ್ಯ ಮಾರಾಟಗಾರರ ಸಂಘ, ಕೆಲ ಮಾಲ್ ಅಸೋಸಿಯೇಷನ್, ಗಾರ್ಮೆಂಟ್ಸ್ ಅಸೋಸಿಯೇಷನ್, ಹೋಲ್ ಸೆಲ್ ಬಟ್ಟೆ ವ್ಯಾಪಾರಸ್ಥರು, ಹೋಟೆಲ್ ಅಸೋಸಿಯೇಷನ್, ಬೆಂಗಳೂರು ಸಂಚಾರಿ ಆಟೋ ಸೇನೆ, APMC ಮಾರುಕಟ್ಟೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ, ಬೀದಿ ಬದಿ ವ್ಯಾಪಾರಿಗಳ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘಟನೆ, ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್, ಖಾಸಗಿ ಶಾಲೆಗಳ ಒಕ್ಕೂಟ ಕೃಪಾ, ಖಾಸಗಿ ಶಾಲೆಗಳ ಒಕ್ಕೂಟ ರುಪ್ಸ ಪೋಷಕರ ಸಮನ್ವಯ ಸಮಿತಿ, ಪೀಸ್ ಆಟೋ ಸಂಘಟನೆ ಮತ್ತು ಕರುನಾಡು ಕಾರ್ಮಿಕ ಸೇನೆ ಬೆಂಬಲ ನೀಡಿದ್ದು, ಕೆಲವು ಸಂಘಟನೆಗಳು ಇಂದು ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಬೆಂಬಲ ನೀಡಿಲ್ಲ ಎಂಬ ಮಾಹಿತಿ ಕೂಡ ತಿಳಿದು ಬಂದಿದೆ. .
