Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಾಪಣ್ಣನ ಕಗ್ಗೊಲೆ, ಹಂತಕರ ಭೇಟೆಗೆ ಖಾಕಿ ತೀವ್ರ ಶೋಧ
  • Crime
  • State

ಮಾಪಣ್ಣನ ಕಗ್ಗೊಲೆ, ಹಂತಕರ ಭೇಟೆಗೆ ಖಾಕಿ ತೀವ್ರ ಶೋಧ

admin March 17, 2025
Spread the love

ಶಹಾಪುರ: ಹಳೇ ವೈಷಮ್ಯಕ್ಕೆ ರೌಡಿಶೀಟರ್ ಸಣ್ಣಮಾಪಣ್ಣ ಬಡಿಗೇರನ ನಡು ರಸ್ತೆಯಲ್ಲಿ ಬರ್ಬರ ಕೊಲೆ ಮಾಡಿದ ಘಟನೆಗೆ ಸಂಭಂಧಪಟ್ಟಂತೆ ಖಾಕಿಯು ಹಂತಕರ ಬೇಟೆ ಕಾರ್ಯ ಚುರಕಾಗಿ ನಡೆಸಿದೆ.

ಇಡೀ ತಾಲೂಕನ್ನೇ ಬೆಚ್ಚಿಬೀಳಿಸಿರುವ ಡಬಲ್ ಮರ್ಡರ್‌ನಿಂದಾಗಿ ಎಲ್ಲೇಡೆ ಕೊಲೆಯ ಬಗ್ಗೆ ಗುಸುಗುಸು ಚರ್ಚೆ ನಡೆಯುತ್ತಿದೆ. ಹಂತಕರ ಬೇಟೆಗೆ ಪೊಲೀಸರ ಎರಡು ತಂಡ ರಚಿಸಿದ್ದು. ರವಿವಾರ ಕೊಲೆ ನಡೆದು ಪ್ರಕರಣ ದಾಖಲಾದ ಬಳಿಕ ಪೊಲೀಸ್ ಕಾರ್ಯಚರಣೆ ಶುರುವಾಗಿದೆ.

ಅಪರಾಧ ನಡೆದಿರುವ ರೀತಿ ನೋಡಿದರೆ ಹಂತಕ ಗ್ಯಾಂಗ್ ಸುಮಾರು ಒಂದು ತಿಂಗಳ ಹೋಮ್‌ವರ್ಕ್ ಮಾಡಿದ್ದು, ಹತ್ಯೆ ಮಾಡಿ ಪರಾರಿ ಆಗುವ ಮಾರ್ಗಗಳು, ಹತ್ಯೆ ಮಾಡಬೇಕಾದ ಸಮಯ, ಯಾವ ಸಮಯದಲ್ಲಿ ಆ ರಸ್ತೆಯಲ್ಲಿ ಜನ ಓಡಾಟ ಇರುವುದಿಲ್ಲ. ಆ ರಸ್ತೆಯ ಸಾಮಾನ್ಯ ದಿನಚರಿಯನ್ನೆಲ್ಲಾ ಗಮನಿಸಿ ಕೃತ್ಯಕ್ಕೆ ಇಳಿದಿದ್ದಾರೆ.

ಇಂದು (ಸೋಮವಾರ ಮಾ. 17) ರಂದು ಸ್ವಗ್ರಾಮ ಮದ್ರಕಿ ಗ್ರಾಮದಲ್ಲಿ ಮೃತ ರೌಢಿಶೀಟರ್ ಮಾಪಣ್ಣ ಮತ್ತು ಸಹಚರ ಅಲಿಸಾಬ್‌ನ ಅಂತ್ಯಕ್ರಿಯೆ ನಡೆಯಿತು. ಸದ್ಯಕ್ಕೆ ಗ್ರಾಮದೆಲ್ಲೇಡೆ ಶಾಂತಿಯ ವಾತವರಣವಿದ್ದು ಗ್ರಾಮದ ಸುತ್ತ ಖಾಕಿ ಸರ್ಪಗಾವಲು ಇತ್ತು.  ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನ ಬರ್ಬರ ಕೊಲೆ

ಒಂದೆಡೆ ಮಾಪಣ್ಣನ ಪತ್ನಿ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಅನುಮಾನವಿರುವ 7 ಜನರ ಹೆಸರನ್ನು ದೂರಿನಲ್ಲಿ ನೀಡಿದ್ದಾರೆ. ಮತ್ತು ಇನ್ನೋರ್ವ ಮೃತ ಅಲಿಸಾಬ್‌ನ ಪತ್ನಿಯು ಸಹ ಮಾಪಣ್ಣನ ಮಕ್ಕಳು ಸೇರಿ ೮ ಜನರ ಹೆಸರನ್ನು ದೂರಿನಲ್ಲಿ ದಾಖಲಿಸಿದ್ದಾರೆ. ಈಗಾಗಲೇ ಕೇಲ ಆರೋಪಿಗಳ ಬಂಧನವಾಗಿದ್ದು ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ಸುಪಾರಿ

ಸದ್ಯಕ್ಕೆ ಪೊಲೀಸರು ಕೊಲೆಗಾರರ ಬೆನ್ನು ಹತ್ತಿದ್ದು, ಕೊಲೆಯಾದ ರೌಡಿಶೀಟರ್ ಮಾಪಣ್ಣನ ಕೊಲೆಗೆ, ಕೊಲೆಯ ಹಿಂದಿರುವ ಮಾಸ್ಟ್ರ್ ಮೈಂಡ್ ಬೇರೆ. ಆ ವ್ಯಕ್ತಿ ಮಾಪಣ್ಣನ ಕೊಲೆಗೆ ಸುಪಾರಿ ನೀಡಿದ್ದು ಅವರು ಈ ಕೃತ್ಯವೇಸಗಿದ್ದಾರೆ ಎಂದು ಉಹಾಪೋಹಗಳು ಕೇಳಿಬರುತ್ತಿವೆ. ಆದ್ದರಿಂದ ಆರೋಪಿಗಳನ್ನು ಪೊಲೀಸರೆ ಗೌಪ್ಯ ಸ್ಥಳದಲ್ಲಿರಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಇನ್ನೂ ಕೇಲವರು ಈಗಾಗಲೇ 5 ಜನರು ತಾವೇ ಠಾಣೆಗೆ ಹೋಗಿ ತಪ್ಪು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ತಾಲೂಕಿನೆಲ್ಲೇಡೆ ಹರಿದಾಡುತ್ತಿದೆ. ಸದ್ಯ ಪೊಲೀಸರು ಕೊಲೆ ಹಿಂದಿನ ಕಾರಣ ಏನು ಅನ್ನೊದನ್ನೂ ಪತ್ತೆ ಹಚ್ಚುತ್ತಿದ್ದಾರೆ. ಹಾಗೆ ಆರೋಪಿಗಳ ಜಾಡಿ ಹಿಡಿದು ಹೊರ ಜಿಲ್ಲೆಗಳಲ್ಲೂ ಹುಡುಕಾಟ ನಡೆಸುತ್ತಿದ್ದಾರೆ.

About the Author

admin

Administrator

Visit Website View All Posts

Spread the love

Post navigation

Previous: ಇಂದು ಪುನೀತ್‌ ರಾಜ್‌ಕುಮಾರ್‌ 50ನೇ ಹುಟ್ಟುಹಬ್ಬ
Next: ಅಪ್ಪು ಹೆಸರಿನ ಬಯೋಗ್ರಫಿ ರೆಡಿ!

Views:

37

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.