ಶಹಾಪುರ: ದಿನಾಂಕ 16 ರಂದು ನಡೆಯುವ ಯಾದಗಿರಿ ನೂತನ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಸನ್ಮಾನ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಕುರುಬ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಶರಣಪ್ಪ ಸಲಾದಪುರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು (ಗುರುವಾರ ಮಾ.13) ರಂದು ಹಾಲುಮತ ಸಮುದಾಯದ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ಹಿನ್ನಲೇ ಈಗಾಗಲೇ ಗ್ರಾಮೀಣ ಭಾಗದಲ್ಲಿ ಪ್ರಚಾರ ಕಾರ್ಯ ನಡೆದಿದೆ. ಸನ್ಮಾನ ಸಮಾರಂಭವು ಬಿಜೆಪಿ ಪಕ್ಷದ ಸಮಾರಂಭ ಎಂಬಂತೆ ಕಾಣುತ್ತಿರುವ ಕಾರಣ ಕುರುಬ ಸಮಾಜದ ಕಾಂಗ್ರೆಸ್ ಪಕ್ಷದ ರಾಜಕೀಯ ಹಿರಿಯ ಮುಖಂಡರು, ಯುವ ಮುಖಂಡರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಜವಾಬ್ದಾರಿಯುತ ಸ್ಥಾನಗಳಲ್ಲಿ ಗುರುತಿಸಿ ಕೊಂಡಿದ್ದಾರೆ. ಆದ್ದರಿಂದ ಕಾಂಗ್ರೆಸ್ ಮುಖಂಡರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮುಸ್ಲಿಮರಿಗೆ ಭರ್ಜರಿ ಕೊಡುಗೆ?!
ಅಸಮಾಧಾನ
ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ ಸಮಾಜದ ಹಿರಿಯರ ಅಭಿಪ್ರಾಯ ಕೇಳಿಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಏಕಾಏಕಿ ಹೀಗೆ ಕಾರ್ಯಕ್ರಮ ಹತ್ತಿರುವಿರುವಾಗ ಈ ರೀತಿಯ ಹೇಳಿಕೆ ನೀಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಕಾಣದ ಕೈಗಳಿಂದ ಸಮಾಜವನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ. ಇಂತಹ ಕಾರಣಗಳಿಂದಲೇ ಸಮಾಜವು ತುಳಿತಕ್ಕೊಳಗಾಗುತ್ತಿದೆ ಎಂದು ಕುರುಬ ಸಮಾಜದ ತಾಲೂಕ ಅಧ್ಯಕ್ಷ ಯಲ್ಲಪ್ಪ ನರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗಿರೆಪ್ಪಗೌಡ ಬಾಣತಿಹಾಳ, ಕಳಸಪ್ಪಗೌಡ ಶಖಾಪುರ, ಶಿವಮಾಹಂತ ಚಂದಾಪುರ, ಧರ್ಮಣ್ಣ ಹೊತಪೇಠ, ವೀರನಗೌಡ ಮಲ್ಲಬಾದಿ, ಬೀಕ್ಷಣಗೌಡ ಕಾಡಂಗೇರ, ಶಾಂತಗೌಡ ನಾಗನಟಿಗಿ, ಮಲ್ಲಣಗೌಡ ತಿಪ್ಪನಹಳ್ಳಿ, ಶಾಂತುಕುಮಾರ ಪಾಟೀಲ, ಭೀಮಾಶಂಕರಗೌಡ ಹುಲ್ಕಲ್, ಶರಬಣ್ಣ ರಸ್ತಾಪುರ, ಕುಮಾರಗೌಡ ಹೊಸ್ಕೇರ, ಸಿದ್ದಣ್ಣ ಕನ್ಯಾಕೊಳ್ಳೂರ, ಶರಣಗೌಡ ಚಾಮನಾಳ ಸೇರಿದಂತೆ ಸಮಾಜದ ಮುಖಂಡರು ಯುವಕರು ಇದ್ದರು.
