ಕೋಲಾರ: ಕೋಲಾರದ ವಿವಿಧ ಸರ್ಕಾರಿ ಕಚೇರಿಗಳಿಗೆ ಇಂದು (ಸೋಮವಾರ ಮಾ. 10) ರಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ರವರು ದಿಡೀರ್ ಭೇಟಿ ನೀಡಿದರು.
ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ರೈತರು ತರಕಾರಿ ಮಾರಾಟಗಾರರಿಂದ ಮಾಹಿತಿ ಪಡೆದರು, ನಂತರ ನಗರಸಭೆ ಕಾರ್ಯಲಯಕ್ಕೆ ಭೇಟಿ ನೀಡಿ ಪೌರಾಯುಕ್ತ ಪ್ರಸಾದ್ ಹಾಗೂ ಸಿಬ್ಬಂದಿ ಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಡದೆ ವಿಳಂಬ ಮಾಡುತಿರುವ ಬಗ್ಗೆ ಲೋಕಸಯುಕ್ತ ಕಚೇರಿಗೆ ದುರುಗಳು ಬಂದಿದ್ದು ಇದಕ್ಕೆ ಕಾರಣ ಮತ್ತು ಸ್ಪಷ್ಟ ಮಾಹಿತಿ ನೀಡುವಂತೆ ಸೂಚಿಸಿ ದರು ಕಛೇರಿ ಯಲ್ಲಿನ ಕೆಲವು ಧಾಖಲೆಗಳನ್ನು ಪರಿಶೀಲಿಸಿದರು. ಇದನ್ನೂ ಓದಿ: ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ ಚುನಾವಣೆ
ಇದೆ ವೇಳೆ ಸಿಬ್ಬಂದಿ ಕಚೇರಿಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿದರು. ಆರೋಗ್ಯ್ ನಿರೀಕ್ಷೆಕ ನವಜ್ ರನ್ನು ತರಾಟೆಗೆ ತೆಗೆದುಕೊಂಡು ಬೇಜವಾಧಾರಿ ನಡವಳಿಕೆ ಇರುವ್ವವರನ್ನು ದೂರದ ಕಲಬುರುಗಿಗೆ ವರ್ಗಾವಣೆ ಮಾಡಬೇಕು ಸರ್ಕಾರಿ ಕಚೇರಿಗಳೇನು ನಿಮಗೆ ಪಾಲವತ್ತಾದ ಭೂಮಿ ಯೇ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್, ಕೋಲಾರ ಲೋಕಾಯುಕ್ತ ಎಸ್ ಪಿ ಧನಂಜಯ ಸಿಬ್ಬಂದಿ ಹಾಜರಿದ್ದರು.
