ಶಹಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಮಂಡಿಸಿದ 16 ನೇ ಬಜೆಟ್ನಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಕಟ್ಟಡ ಕಾರ್ಮಿಕರಿಗೆ, ತೋಟಗಾರಿಗೆ ಈಗೇ ಪ್ರತಿಯೊಂದು ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿದ್ದು, ಅತ್ಯುತ್ತಮವಾದ ಬಜೆಟ್ ಮಂಡಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರುಬ ಸಮಾಜದ ತಾಲೂಕ ಅಧ್ಯಕ್ಷ ಯಲ್ಲಪ್ಪ ನರಿ ಅಭಿನಂದಿಸಿದ್ದಾರೆ.
ರಾಜ್ಯದ ಎಲ್ಲ ವರ್ಗದ ಜನರ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ದಿಗೆ ಪೂರಕವಾದ ಬಜೆಟ್ ಅನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ. ರಾಜ್ಯದ ಬಡವರ, ಮಹಿಳೆಯರ ಯುವಕರ ಹಾಗೂ ರೈತರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು ಬಜೆಟ್ನಲ್ಲಿ ನೀಡಿದ್ದಾರೆ. ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಸರ್ಕಾರದ ಆದ್ಯತೆ: ಹೆಬ್ಬಾಳಕರ್
ಆಶಾ ಕಾರ್ಯಕರ್ತೆಯರಿಗೆ, ಸಹಾಯಕರಿಗೆ, ಬಿಸಿಯೂಟ ಸಿಬ್ಬಂದಿಗಳಿಗೆ, ಅಡುಗೆ ಹೆಲ್ಪರ್ಗಳಿಗೆ ಗೌರವಧನ ಮತ್ತು ವೇತನಗಳನ್ನು ಹೆಚ್ಚಳ ಮತ್ತು ಪತ್ರಕರ್ತರ ಮಾಸಾಶನ 15 ಸಾವಿರ ರೂ, ಗೆ ಹಾಗೂ ಕುಟುಂಬ ಮಾಸಾಶನ 7500 ರೂಗೆ ಹೆಚ್ಚಳ ಮಾಡಲಾಗಿದೆ ಈ ಮೂಲಕ ಬಹಳ ಉತ್ತಮ ಕೆಲಸ ಮಾಡಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿ, ಧಾರ್ಮಿಕ ಕ್ಷೇತ್ರ, ಅಬಕಾರಿ, ತೆರಿಗೆ ಸಂಗ್ರಹದ ಗುರಿ, ರೇಷ್ಮೇ ಈಗೇ ಹಲವು ಕ್ಷೇತ್ರಕ್ಕೆ ಬಜೆಟ್ ಘೋಷಿಸಿದ್ದು ಮುಂದಿನ ಒಂದು ವರ್ಷಗಳ ಕಾಲದ ರಾಜ್ಯದ ಸಮಗ್ರ ಅಭಿವೃದ್ದೀಗೆ ಈ ಬಜೆಟ್ ದಾರಿದೀಪವಾಗಲಿದೆ. ನಗರಕ್ಕೆ 10 ಕೋಟಿ ರೂ ಕ್ರೀಡಾ ವಸತಿ ಶಾಲೆ ಘೋಷಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತು ಸಣ್ಣ ಕೈಗಾರಿಕೆ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಧನ್ಯವಾದ ತಿಳಿಸಿದರು.
