ಶಹಾಪುರ: ಗ್ರಾಮೀಣ ಭಾಗದಲ್ಲಿ ಉತ್ತಮವಾದ ಶಿಕ್ಷಣ ಸಿಗುವುದೇ ಸವಾಲಾಗಿದ್ದು ಇಂತಹ ಆಧುನಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಜ್ಞಾ ಶಾಲೆಯು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತವರಣ ಸೃಷ್ಠಿಸಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಆರ್.ಚನ್ನಬಸ್ಸು ವನದುರ್ಗ ಹೇಳಿದರು.
ತಾಲೂಕಿನ ಗಂಗನಾಳ ಗ್ರಾಮದಲ್ಲಿರುವ ಪಜ್ಞಾ ಕಿರಿಯ ಪ್ರಾಥಮಿಕ ಶಾಲೆಯ ದಶಮಾನೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವರ್ಷವಿಡೀ ವ್ಯಾಸಂಗಕ್ಕೆ ಪೂರಕವಾಗಿ ಹಲವು ಪ್ರೋತ್ಸಾಹಕಾರಿ ಯೋಜನೆ ಮೂಲಕ ಮಕ್ಕಳಿಗೆ ಬಗೆ ಬಗೆಯ ಪರಿಕರ ಮತ್ತು ಸೌಲತ್ತು ನೀಡಲಾಗುತ್ತಿದೆ. ಗುಣಾತ್ಮಕ ಕಲಿಕೆ ನೀಡುವುದರ ಜೊತೆಗೆ ಶಿಕ್ಷಣ ನೀಡುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಸರ್ವರ ಮಾರ್ಗದರ್ಶನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದರು. ಇದನ್ನೂ ಓದಿ:
ಮುಖಡರಾದ ಹೊನ್ನಪ್ಪ ಗಂಗನಾಳ ಮಾತನಾಡಿ, ಸಂಸ್ಕಾರಯುತ, ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಶಿಕ್ಷಣ ನೀಡುವುದೇ ಶಾಲೆಯ ಧ್ಯೇಯವಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ಕಿಲಾರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನಾರಾಯಣಚಾರ್ಯ ಸಗರ, ಚಂದ್ರನಾಥ, ತಿಪ್ಪಮ್ಮ ಸಗರ, ಧರ್ಮರಾಜ ಸಿಆರ್‌ಪಿ, ರಾಮು ಸಗರ, ಹರಿಲಾಲ್ ರಾಠೋಡ್, ಮಾಯಮ್ಮ ಎಂ ಅರಿಕೇರಿ ಸೇರಿದಂತೆ ಇತರರು ಇದ್ದರು.
