ಶಹಾಪುರ: ತಾಲೂಕಿನ ಗೋಗಿ.ಕೆ ಗ್ರಾಮದಲ್ಲಿ ಒತ್ತುವರಿ ಹೆಸರಲ್ಲಿ ರಸ್ತೆಯನ್ನು ಬಂದ್ ಮಾಡಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದು, ಕನಿಷ್ಠ ಕಾಲ್ನಡಿಗೆಯ ವ್ಯವಸ್ಥೆ ಸಹ ಇಲ್ಲಾ. ಈ ಕುರಿತು ಜನಪ್ರತಿನಿಧಿಗಳಿಗೆ, ತಹಸೀಲ್ದಾರ, ಇಒ, ಗ್ರಾ.ಪಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲಾ ಎಂದು ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಣಗೌಡ ಪರಿವಾಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಬಸ್ ನಿಲ್ದಾಣದಿಂದ ಅಗಸಿಗೆ ಹೋಗುವ ರಸ್ತೆಯ ಮಧ್ಯೆ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳ ತ್ಯಾಜ್ಯ ನೀರು ನಿಂತು ರಸ್ತೆಯಲ್ಲಿ ಗುಂಡಿಬಿದ್ದಿದೆ. ಸೂಕ್ತ ಚರಂಡಿ, ರಸ್ತೆ ವ್ಯವಸ್ಥೆ ಇಲ್ಲದೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮಲೀನ ನೀರು ಪ್ರತಿನಿತ್ಯವೂ ಹರಿಯುತ್ತದೆ. ಇದು ಗ್ರಾಮಸ್ಥರನ್ನು ಕಂಗೆಡಿಸುತ್ತಿದೆ. ಸುಮಾರು 20 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಸೂಕ್ತ ರಸ್ತೆಗಳು, ಚರಂಡಿಗಳ ವ್ಯವಸ್ಥೆಯೇ ಇಲ್ಲ. ಚರಂಡಿ ಇಲ್ಲದ ಕಾರಣ ಬಹುತೇಕ ಕಡೆ ಮನೆಗಳ ಮುಂದೆಯೇ ನೀರು ಶೇಖರಣೆಗೊಳ್ಳುತ್ತಿದೆ. ಇದನ್ನೂ ಓದಿ: ವಿವಿ ಮುಚ್ಚುಸುವ ಬದಲು ವೈನ್ ಸ್ಟೋರ್, ಬಾರ್ ಗಳನ್ನ ಮುಚ್ಚಿಸಿ: ಆರ್ ಅಶೋಕ್
ಕೇಲ ದಿನಗಳ ಹಿಂದಷ್ಟೇ ಗೋಗಿಯ ಚಂದಾ ಹುಸೇನಿ ದರ್ಗಾ ಜಾತ್ರೆ ಮಹೋತ್ಸವ ನಡೆಯಿತು. ಆಗಲು ಸಹ ಇಂತಹ ರಸ್ತೆಯಲ್ಲಿಯೇ ಜನ ತೆರಳಿದರು. ಕೂಡಲೇ ಸಮಸ್ಯೆ ಏನೆ ಇರಲಿ ಗ್ರಾಮಸ್ಥರ ಹಿತದೃಷ್ಟಿಯಿಂದ ಸಮಸ್ಯೆಯನ್ನು ಬಗೆಹರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರೆ ಜನತೆಗೆ ಅನುಕೂಲವಾಗಲಿದೆ ಎನ್ನುವುದು ಕೇಲವರ ಅಭಿಪ್ರಾಯವಾಗಿದೆ.
ಗ್ರಾಮದಲ್ಲಿ ರಸ್ತೆ ಯಾವುದೊ, ಚರಂಡಿ ಯಾವುದೊ ತಿಳಿಯದಂತಹ ವಾತಾವರಣ ನಿರ್ಮಾಣವಾಗಿದೆ. ಹಳೆಯ ರಸ್ತೆಯಾಗಿದ್ದು, ರಸ್ತೆ ಕೊಚ್ಚೆಗುಂಡಿ ಯಾಗಿದೆ. ಗ್ರಾಮಸ್ಥರೊರ್ವರು ರಸ್ತೆ ನಮ್ಮ ಸರ್ವೆ ನಂ.ರಲ್ಲಿ ಬರುತ್ತದೆ ಎಂದು ಹೇಳಿ ಸಂಚಾರಕ್ಕೆ ತಡೆ ಹಿಡಿದಿದ್ದಾರೆ. ಚರಂಡಿ, ನೀರು ಮನೆಗಳ ತ್ಯಾಜ್ಯ ನೀರೆಲ್ಲವೂ ಒಂದೆಡೆ ಸೇರಿ ತಗ್ಗು ಬಿದ್ದಿದೆ. ಕೂಡಲೇ ಈ ಬಗ್ಗೆ ಸಚಿವರು ಮುತುವರ್ಜಿ ವಹಿಸಿ ಅಧಿಕಾರಿಗಳಿಗೆ ಸೂಚಿಸಿ ರಸ್ತೆ ಸಮಸ್ಯೆ ಬಗೆಹರಿಸಬೆಂಕು ಎಂದು ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಜೀರ್ ಪಟೇಲ್ ಹೇಳಿದರು.
ಕೇಲವರು ರಸ್ತೆ ಒತ್ತುವರಿಯಾಗಿದೆ ಎಂದು ತಕರಾರು ಮಾಡುತ್ತಿದ್ದು, ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೇಲ ದಿನಗಳ ಹಿಂದೆ ತೆಗ್ಗು ಬಿದ್ದ ಸ್ಥಳದಲ್ಲಿ ಸ್ವಚ್ಚಗೊಳಿಸಲು ಮರಮ್ ಹಾಕಲು ಸಿಬ್ಬಂದಿಗಳೊಂದಿಗೆ ತೆರಳಿದ್ದ ವೇಳೆ ಗ್ರಾಮದ ಕೇಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ರಸ್ತೆಯ ಅಳತೆಯ ಬಗ್ಗೆ ಸರ್ವೆ ಮಾಡಿಸಿ ಮುಂದಿನ ಕಾರ್ಯ ಕೈಗೊಳ್ಳಲಾಗುವುದು ಎಂದು ತಾ.ಪಂ ಇಒ ಬಸವರಾಜ ಶರಬೈ ತಿಳಿಸಿದರು.
ಗ್ರಾಮದಲ್ಲಿರುವ ದರ್ಗಾಕ್ಕೆ ತೆರಳುವ ರಸ್ತೆ ಇದಾಗಿದ್ದು, ಮನೆಗಳ ಗಲೀಜು ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ಓಡಾಡಲು ತೊಂದರೆಯಾಗುತ್ತಿದೆ. ಕಾಲುದಾರಿ ಸಹ ಇಲ್ಲ. ಈಗಾಗಲೇ ಇದೇ ರಸ್ತೆಯ ಕುರಿತು ದೂರು ಇದ್ದು, ನ್ಯಾಯಲಯದಲ್ಲಿದೆ, ಆದರೆ ಅಧಿಕಾರಿಗಳು ಗಮಹರಿಸಿ ತಾತ್ಕಲಿಕವಾಗಿ ಮರಮ್ ಹಾಕಿ ದುರಸ್ಥಿ ಮಾಡಿಸಿದರೆ ಜನತೆಯ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
