ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೂಲ ಉದ್ದೇಶವೇ ನಗರವನ್ನು ಸ್ವಚ್ಛತವಾಗಿ ಕಾಪಾಡುವ ಉದ್ದೇಶವಾಗಿದೆ. ಆದರೆ ಬಿಬಿಎಂಪಿಯ ಕಡೆಯಿಂದಲೇ ಕೆರೆಕಟ್ಟೆಗಳಿಗೆ ಕಲುಷಿತ ಘನ ತ್ಯಾಜ್ಯ ಮತ್ತು ಕಲುಷಿತ ನೀರನ್ನು ಬಿಡುವುದರಿಂದ ನಗರದಲ್ಲಿರುವ ನಿವಾಸಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಹೌದು, ಬಿಬಿಎಂಪಿಯ ಮೂಲ ಉದ್ದೇಶವೇ ನಗರವನ್ನು ಸ್ವಚ್ಛವಾಗಿಡುವುದರ ಜೊತೆಗೆ ನಗರವಾಸಿಗಳ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸ್ವಚ್ಛತೆಯನ್ನು ಕಾಪಾಡುವ ಕೆಲಸವಾಗಿದೆ.
ಆದರೆ ಬಿಬಿಎಂಪಿ ಘನ ತ್ಯಾಜ್ಯ ಸಂರಕ್ಷಣಾ ಘಟಕದಿಂದ ಗಬ್ಬುವಾಸನೆ ಬರುವುದರಿಂದ ದೊಡ್ಡನಾಗಮಂಗಲ ಗ್ರಾಮಸ್ಥರು ದಿನನಿತ್ಯ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಗುವ ವಿದ್ಯಾಭ್ಯಾಸ ಎಲ್ಲ ಜಿಲ್ಲೆಯಲ್ಲೂ ಸಿಗಬೇಕು: ಡಿಸಿಎಂ
ಬಿಬಿಎಂಪಿ ಘನ ತ್ಯಾಜ್ಯ ಸಂರಕ್ಷಣೆ ಘಟಕದಿಂದ ವಾತಾವರಣ ಕಲುಷಿತವಾಗುತ್ತಿದೆ ಹಾಗೂ ಅಂತರ್ಜಲದ ಮೂಲಗಳಾದ ಕೆರೆ ಕಟ್ಟಿಗಳು ಸಂಪೂರ್ಣ ಕಲುಷಿತವಾಗಿದೆ ಇದರಿಂದ ಜನರ ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ಗ್ರಾಮಸ್ಥರು ಬಿಬಿಎಂಪಿ ವಿರುದ್ಧ ಇಂದು (ಶನಿವಾರ ಫೆ. 15) ರಂದು ಬೃಹತ್ ಪ್ರತಿಭಟನೆಯನ್ನು ನಡೆಸಿದ್ದಾರೆ.
ಇನ್ನು ಸಂರಕ್ಷಣಾ ಘಟಕದಿಂದ ಕಲುಷಿತ ನೀರನ್ನು ಜಲ ಮೂಲಗಳಿಗೆ ಹರಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಗಾಳಿಯು ಕೂಡ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಹಾಗಾಗಿ ಕೂಡಲೇ ಘನ ತ್ಯಾಜ್ಯ ಸಂರಕ್ಷಣಾ ಘಟಕ ಬಂದು ಮಾಡಿ ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕೇವಲ ಪ್ರತಿಭಟನೆ ಮಾಡಿದಾಗ ಮಾತ್ರ ಭರವಸೆ ಕೊಟ್ಟು ನಾಪತ್ತೆ ಆಗುತ್ತಾರೆ. ಇದರಿಂದ ನಿತ್ಯ ನರಕ ಯಾತನೆ ನಾವು ಅನುಭವಿಸುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಕಲುಷಿತಗೊಂಡ ನೀರು ಕುಡಿಯುವ ನಮಗೆ ಸುತ್ತಮುತ್ತಲಿನ ವಾಸನೆಯೂ ಕೂಡ ಗಬ್ಬು ನಾರುತಿದೆ ಇದರಿಂದ ಉಸಿರಾಟದ ತೊಂದರೆ ಕೂಡ ಆಗುತ್ತಿದೆ.
ಇನ್ನು ಬಿಬಿಎಂಪಿಯು ತನ್ನ ಲೋಪವನ್ನು ಮುಚ್ಚಿ ಹಾಕಲು ತೋರಿಕೆ ಉತ್ತರ ನೀಡಿ ಗ್ರಾಮಸ್ಥರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
