ಶಹಾಪುರ: ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡು ಹಮಾಲರಿಗೆ ದೈಹಿಕ ಬಲವೊಂದನ್ನೆ ಕುಟುಂಬ ನಿರ್ವಹಣೆಗೆ ಆಧಾರವಾಗಿಸಿಕೊಂಡು ಕೆಲಸ ಮಾಡುವ ಹಮಾಲರ ಬದುಕು ಅತಂತ್ರ ಸ್ಥಿತಿಯಲ್ಲಿದ್ದು ಸರ್ಕಾರ ನಮಗೆ ಆಸರೆ ಯಾಗಬೇಕು ಎಂದು ಹಮಾಲರು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಅವರಿಗೆ ಮನವಿ ಪತ್ರ ನೀಡಿದರು.
ಹಮಾಲರ ಬದುಕು ಅಭದ್ರವಾಗಿದೆ
ಎಪಿಎಂಸಿಯಲ್ಲಿ ನೋಂದಾಯಿಸಿ ಕೆಲಸ ಮಾಡುವವರಿಗಿಂತ ಹೊರಭಾಗದಲ್ಲೂ ಮೂಟೆಗಳ ಭಾರ ಎತ್ತುವ ಹಮಾಲರಿದ್ದಾರೆ. ದಿನಗೂಲಿಯಾಗಿ ದುಡಿಯುವ ನಮಗೆ ಪ್ರತಿನಿತ್ಯದ ಕೈತುಂಬ ಕೆಲಸ ಇರುತ್ತದೆ ಎನ್ನುವ ಖಾತರಿ ಇಲ್ಲ. ಅರ್ಧದಷ್ಟು ಹಮಾಲರು ಕೆಲಸವಿಲ್ಲದೆ ಕುಳಿತುಕೊಳ್ಳುತ್ತೇವೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತದೆ.
ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸರ್ಕಾರದಿಂದ ದಿನಗೂಲಿ ಕೊಡಬೇಕು ಎನ್ನುವುದು ಹಮಾಲರ ಪ್ರಮುಖ ಬೇಡಿಕೆ. ಎಲೆಮರೆ ಕಾಯಿಯಂತೆ ಕೆಲಸ ಮಾಡಿಕೊಂಡಿರುವ ಹಮಾಲರ ಕ್ಷೇಮಾಭಿವೃದ್ದಿಗೆ ರೂಪಿಸಿದ ಯೋಜನೆಗಳು ಎಪಿಎಂಸಿ ಆವರಣಕ್ಕೆ ಸಿಮೀತವಾಗಿದೆ. ನಮಗೆ ನಿವೇಶನ ಮತ್ತು ವಸತಿಗಳನ್ನು ನಿರ್ಮಾಣ ಮಾಡಿಕೊಡಬೇಕು. ಕಾರ್ಮಿಕ ಇಲಾಖೆಯಲ್ಲಿ ಇದೀಗ ಅಸಂಘಟಿತ ಕಾರ್ಮಿಕರಿಗೂ ಗುರುತಿನ ಚೀಟಿ ಹಾಗೂ ವಿಮಾ ಸೌಲಭ್ಯಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಹಮಾಲರಲ್ಲಿ ಜಾಗೃತಿ ಕೊರತೆ ಇದ್ದು, ಸಾಕಷ್ಟು ಸಂಖ್ಯೆಯಲ್ಲಿ ಇನ್ನೂ ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಪಡೆದಿಲ್ಲ.
ನಗರದ ಎಪಿಎಂಸಿ, ಕಿರಣಾ ಬಜಾರ್, ಹತ್ತಿ ಮಾರ್ಕೆಟ್, ಜಿನ್ನಿಂಗ್ ಮಿಲ್ಗಳು, ಅಕ್ಕಿ ಗಿರಣಿಗಳಲ್ಲಿ, ತರಕಾರಿ ಮಾರ್ಕೆಟ್ಗಳಲ್ಲಿ ಹಮಾಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನೂ ಓದಿ: ಗ್ರಾಮ ಪಂಚಾಯತಿಗಳೇ ಸರ್ಕಾರಗಳಾಗಿ: ಪ್ರಿಯಾಂಕ್ ಖರ್ಗೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿದಂತೆ ವ್ಯಾಪಾರದ ಸ್ಥಳಗಳಲ್ಲಿ ಚೀಲಕ್ಕೆ ಇಂತಿಷ್ಟು ಅಥವಾ ಕ್ವಿಂಟಾಲ್ಗೆ ಇಂತಿಷ್ಟು ಹಣ ನಿಗದಿಪಡಿಸಿ ನಿತ್ಯ ಕೆಲಸ ಮಾಡುತ್ತಿದ್ದಾರೆ. ಅಹೋರಾತ್ರಿ ಧೂಳಿನಲ್ಲಿ ಕೆಲಸ ಮಾಡುವ ಈ ವರ್ಗದ ಜನರಿಗೆ ಕನಿಷ್ಠ ಸೌಲಭ್ಯಗಳು ನೀಡಿಲ್ಲ.
ನಮಗೆ ಹಕ್ಕು ಹಾಗೂ ಉದ್ಯೋಗ ಭದ್ರತ ಎಂಬುವುದಿಲ್ಲ. ಕನಿಷ್ಠ ಅವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಕೂಡ ನಡೆಯುವುದಿಲ್ಲ. ಆದ್ದರಿಂದ ಸರ್ಕಾರ ಹಮಾಲರ ಬದುಕು ನಿರ್ವಹಣೆಗೆ ಯೋಜನೆಗಳನ್ನು ರೂಪಿಸಿ ಸಹಾಯ ಮಾಡುವ ಕೆಲಸ ಮಾಡಬೇಕಿದೆ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರದಾನ ಸಂಚಾಲಕರಾದ ಭೀಮಣ್ಣ ಶಖಾಪುರ್ ನೇತೃತ್ವದಲ್ಲಿ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಮಾಲರಾದ ಹೊನ್ನಪ್ಪ ಹಳ್ಳೆಜೋಳ, ಚಂದ್ರಪ್ಪ ದೇವಿ ನಗರ , ದೇವೀಂದ್ರಪ್ಪ ಮಡಿವಾಳೇಶ್ವರ್ ನಗರ, ತಿಪ್ಪಣ್ಣ ದೇವಿ ನಗರ ಇದ್ದರು.
