Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮಾಧ್ಯಮ ಲೋಕದಲ್ಲಿ ಸಾಧನೆಗೈದ ಬೆಳ್ಳಿ ತಟ್ಟೆಗೆ ಪ್ರಶಸ್ತಿ
  • Bangalore
  • State

ಮಾಧ್ಯಮ ಲೋಕದಲ್ಲಿ ಸಾಧನೆಗೈದ ಬೆಳ್ಳಿ ತಟ್ಟೆಗೆ ಪ್ರಶಸ್ತಿ

admin February 3, 2025 1 minute read
Spread the love

ಬೆಂಗಳೂರು: ಪತ್ರಕರ್ತ ಶಿವಕುಮಾರ ಬೆಳ್ಳಿತಟ್ಟೆ ಅವರು, ನಾಗರಿಕ ಸಮಸ್ಯೆಗಳು, ಕುಂದುಕೊರತೆಗಳ ವರದಿಗಾರಿಕೆಯಲ್ಲಿ ಸಿದ್ಧಹಸ್ತರು. ವಿಶೇಷವಾಗಿ ದಲಿತರು. ಹಿಂದುಳಿದ ಸಮುದಾಯದ ಸಮಸ್ಯೆಗಳನ್ನು ಬಿಂಬಿಸುವ ಲೇಖನಗಳಿಗೆ ಜೀವ ತುಂಬಿದವರು.

ಕರ್ನಾಟಕ ಮಾಧ್ಯಮ ಅಕಾಡೆಮಿಯು 2023ನೇ ಸಾಲಿನ ಪ್ರಶಸ್ತಿಗೆ ಶಿವಕುಮಾರ ಬೆಳ್ಳಿತಟ್ಟಿರವರನ್ನು ಆಯ್ಕೆ ಮಾಡಿದೆ. ಇವರು ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಚಾಮರಾಜನಗರ ಜಿಲ್ಲೆಯವರಾಗಿದ್ದು, 1975ರಲ್ಲಿ ಜನನ, ತಂದೆ ಎಂಪಿ ದೊಡ್ಡ ಬಸವಯ್ಯ, ತಾಯಿ ಮುತ್ತಮ್ಮ.

1998ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಪತ್ರಿಕೋದ್ಯಮದಲ್ಲಿ 24 ವರ್ಷಗಳ ಅನುಭವ ಹೊಂದಿದ್ದಾರೆ. ‘ಮಂಡ್ಯ ಸುದ್ದಿ’ ಪತ್ರಿಕೆ ವರದಿಗಾರನಾಗಿ ವೃತ್ತಿ ಬದುಕಿಗೆ ಪ್ರವೇಶ. ನಂತರ ‘ಉದಯ ನ್ಯೂಸ್’, ‘ಈ ಸಂಜೆ’, ‘ಟೈಮ್ಸ್ ಆಫ್ ಇಂಡಿಯಾ’ ಕನ್ನಡ ಆವೃತ್ತಿ ಪತ್ರಿಕೆಗಳಲ್ಲಿ ಪ್ರಧಾನ ವರದಿಗಾರ. ‘ಕನ್ನಡಪ್ರಭ’ದಲ್ಲಿ 11 ವರ್ಷಗಳ ಸೇವೆ, ಮುಖ್ಯ ವರದಿಗಾರ ಸೇರಿದಂತೆ ಹಲವು ಹುದ್ದೆಗಳ ಸಮರ್ಥ ನಿರ್ವಹಣೆ, ಪ್ರಸ್ತುತ ‘ವಿಶ್ವವಾಣಿ’ ಪತ್ರಿಕೆ ಸುದ್ದಿ ಸಂಪಾದಕರಾಗಿ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯದರ್ಶಿಯಾಗಿ ಶಿವಕುಮಾರ ಬೆಳ್ಳಿತಟ್ಟೆಯವರು ಕಾರ್ಯನಿರ್ವಹಿಸುತ್ತಿದ್ದಾರೆ.

ವಿಶೇಷ ವರದಿಗಳ ಮೂಲಕ ಸರ್ಕಾರಗಳ ಕಣ್ಣುತೆರೆಸಿ ಬಡವರಿಗೆ ನ್ಯಾಯ ಒದಗಿಸಿರುವ ಶಿವಕುಮಾರ ಅವರು, ದಾಖಲೆ ಸಹಿತ ವರದಿ ಪ್ರಕಟಿಸಿ ಸರ್ಕಾರದ ಆಸ್ತಿಗಳ ರಕ್ಷಣೆ, ಹತ್ತು ಹಲವು ಸರ್ಕಾರಿ ಯೋಜನೆಗಳ ದುರ್ಬಳಕೆ ತಡೆಗೆ ಕಾರಣರಾದರು. ಇದನ್ನೂ ಓದಿ: ಪತ್ರಕರ್ತರಿಗೆ ಸಿಹಿ ಸುದ್ದಿ ನೀಡಿದ ಡಿಸಿಎಂ

ಪತ್ರಕರ್ತರ ಸಂಘಟನೆಗಳಲ್ಲಿ ಸಕ್ರಿಯ ಹಾಗೂ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿ, ಬಿಬಿಎಂಪಿಯಿಂದ ಚಿಕಿತ್ಸಾ ವೆಚ್ಚ ದೊರಕಿಸಲು ಸತತ ಪ್ರಯತ್ನ ನಡೆಸುವ ಸಹೃದಯಿ ಪತ್ರಿಕೋದ್ಯಮ ಸೇವೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವ ಪುರಸ್ಕಾರ ನೀಡಿವೆ. 2005ರಲ್ಲಿ ಕೆಂಪೇಗೌಡ ಪ್ರಶಸ್ತಿ, ಮೀಡಿಯಾ ಅಸೋಸಿಯೇಷನ್ ಪ್ರಶಸ್ತಿ, ಚಾಮರಾಜನಗರ ಜಿಲ್ಲಾ ರೋಟರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

ಪತ್ರಿಕೋದ್ಯಮದಲ್ಲಿನ ಸಾಧನೆ ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

About the Author

admin

Administrator

Visit Website View All Posts

Spread the love

Post navigation

Previous: ವಿರೋಧ ಪಕ್ಷದವರಿಗೆ ಅಧಿಕಾರ ಬಿಟ್ಟುಕೊಡುವ ಮಾತೇ ಇಲ್ಲ
Next: ಹೆಚ್ಚು ಪ್ರಚಾರ ಮಾಡಿ ಹೀರೋ ಮಾಡೋದು ಬೇಡ: ಗಂಗನಾಳ

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.