ಶಹಾಪುರ: ಸರ್ಕಾರಿ ಉದ್ಯೋಗ ಪಡೆಯುವ ಆಸೆಯಿಂದ ಕೆಲವರು ಅಕ್ರಮ ಮಾರ್ಗವನ್ನು ತುಳಿದು ಸಿಕ್ಕಿಬಿದ್ದ ಉದಾಹರಣೆಗಳಿವೆ ಅದರಲ್ಲಿ ಸರ್ಕಾರದ ನಕಲಿ ಸಹಿ ಮಾಡಿ ಉದ್ಯೋಗ ಪಡೆದು ಐಷರಾಮಿ ಜೀವನಕ್ಕೆ ಒಗ್ಗಿ, ಇಚ್ಚಾನುಸಾರ ಭ್ರಷ್ಟಚಾರ ನಡೆಸುತ್ತಿರುವ ಆರೋಪಿ ಅರುಣ್ ಚವ್ಹಾಣ ವಿರುದ್ಧ ಕ್ರಮ ತೆಗೆದುಕೊಂಡು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಪೌರಾಡಳಿತ ನಿರ್ಧೇಶನಾಲಯ ನಿರ್ಧೇಶಕರಿಗೆ ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ಮನವಿ ಪತ್ರ ಸಲ್ಲಿಸಿದರು.
ಈಗಾಗಲೇ ಈ ಬಗ್ಗೆ ಪತ್ರಿಕೆಗಳು ನಿತ್ಯ ವರದಿಗಳನ್ನು ಮಾಡುತ್ತಲೇ ಇವೆ. ಆದರೆ ಕ್ರಮ ಆಗುತ್ತಿಲ್ಲಾ. ಈಗಾಗಲೇ ಆರೋಪಿತ ನೌಕರನ ಮೇಲಿನ ಆರೋಪಗಳನ್ನು ರುಜುವಾತು ಪಡಿಸಲಾಗಿದೆ. ಇದನ್ನೂ ಓದಿ: ಟಿಬಿ ಮುಕ್ತ ಭಾರತ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ
ಆರೋಪಿತ ನೌಕರ ಅರುಣ್ ಚೌವ್ಹಾಣ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ದಿ.1.10.22 ರಂದು ಮನವಿ ಅರ್ಜಿ ಸಲ್ಲಿಸಿ ಯಾದಗಿರಿ ಕಚೇರಿಯಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಹಾಜರಾಗಲು ಅನುಮತಿಸಲು ಮನವಿ ಸಲ್ಲಿಸಿದ್ದು, ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಸ್ನೇಹಲ್ ಆರ್. ಅವರು ಮನವಿಯ ಅರ್ಜಿಯ ಮೇಲೆ ಹಾಜರಾಗುವಂತೆ ಟಿಪ್ಪಣಿ ನಮೂದಿಸಿದ್ದಾರೆ. ಸರ್ಕಾರದಿಂದಲೇ ನಕಲಿ ವರ್ಗಾವಣೆ ಆದೇಶ ಪ್ರತಿಯನ್ನು ಸೃಷ್ಠಿಸಿ ವರದಿ ಮಾಡಿಕೊಳ್ಳುವುದರ ಮೂಲಕ ಪ್ರಸ್ತುತ ಕೆಂಭಾವಿ ಪುರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆ ನಿಭಾಯಿಸುತ್ತಿದ್ದು, ಸರ್ಕಾರಕ್ಕೆ ವಂಚನೆ ಮಾಡಿದ್ದಾನೆ.
ಇದಾದ ಬಳಿಕ ಇಲಾಖಾ ವಿಚಾರಣೆ ನಡೆಸಲು ಹಾಜರಾಗಲು ದಿ. 14-12-23, 4-01-24, 18-01-24, 7-02-24 ಮತ್ತು 14-02-24 ರಂದು ನೋಟಿಸ್ ಜಾರಿ ಮಾಡಲಾಗಿದೆ.
ಇಷ್ಟೇ ಅಲ್ಲದೇ ಸ್ವತಃ ತಾನೆ ನಕಲಿ ವರ್ಗಾವಣೆ ಆದೇಶ ಪ್ರತಿಯನ್ನು ಸಹ ಸೃಷ್ಠಿಸಿಕೊಂಡು ವಿಜಯಪುರ ಮತ್ತು ಯಾದಗಿರಿಯಲ್ಲಿ ಕಳ್ಳಾಟ ಆಡುತ್ತಿದ್ದಾನೆ.
ಈಗಾಗಲೇ ಹೈನಾತಿ ಅರುಣ್ ಚವ್ಹಾಣ ವಿರುದ್ಧ ದೂರು ದಾಖಲಾಗಿದ್ದರು ಸಹ ರಾಜಾ ಗಾಂಭಿರ್ಯದಲ್ಲಿ ಓಡಾಡುತ್ತಿದ್ದಾನೆ. ಮತ್ತು ನಕಲಿ ಸಹಿ ಮಾಡಿಕೊಂಡು ನೇಮಕಾತಿ, ವರ್ಗಾವಣೆ ಮಾಡಿಕೊಂಡಿ ಭಾರಿ ವಂಚನೆಗೆ ಇಳಿದುಬಿಟ್ಟಿದ್ದಾನೆ. ಇತನನ್ನು ಬಂಧಿಸಿ ಜಾಲಾಡಿದರೆ ಇರುವ ಸತ್ಯ ಭಯಲಿಗಿಳಿಯಲಿದೆ. ಆದರೆ ಈ ಸಾಹಸವನ್ನು ಇಲಾಖೆಯವರಾಗಲಿ, ಜಿಲ್ಲಾಧಿಕಾರಿಗಳಾಗಲಿ ಯಾರು ಸಹ ಮಾಡುತ್ತಿಲ್ಲಾ. ಈಗಾಗಲೇ ಆರೋಪಿ ಅರುಣ್ ಚವ್ಹಾಣ ವಿರುದ್ಧ 204 ಕೇಸ್ ಸಹ ಇದ್ದು ಕರ್ತವ್ಯ ಮಾಡಿ ಹೋದ ಕಚೇರಿಗಳಲ್ಲಿ ವಿಚಾರಿಸಿದಾಗ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಇದರಿಂದ ಮೂಲ ಬಯಲಾಗಿದ್ದು, ಕೂಡಲೇ ಇತನನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು. ಬಳಿಕ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಭರವಸೆಯನ್ನು ಮಾನ್ಯ ನಿರ್ಧೇಶಕರು ನೀಡಿದರು.
ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ. ಸರ್ಕಾರದ ಮಟ್ಟದಲ್ಲಿಯೇ ಕ್ರಮ ಆಗಬೇಕಿದೆ. ತಮ್ಮ ಕೈಯಲ್ಲಿ ಏನೂ ಇಲ್ಲಾ ಎಂದು ಜಿಲ್ಲಾ ನಗರಾಭಿವೃದ್ದಿಕೋಶ ಯೋಜನಾ ನೀರ್ಧೆಶಕರು ಲಕ್ಷ್ಮೀಕಾಂತ ರವರು ಹೇಳಿದ್ದಾರೆ.
