Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸ್ವಾಮೀಜಿಯ ವಲಯದಿಂದಲೇ ಮತ್ತೆ ಸಂವಿಧಾನದ ಕುರಿತು ಅಪಸ್ವರ: ಮಹದೇವಪ್ಪ
  • Bangalore
  • Crime
  • Politics
  • State

ಸ್ವಾಮೀಜಿಯ ವಲಯದಿಂದಲೇ ಮತ್ತೆ ಸಂವಿಧಾನದ ಕುರಿತು ಅಪಸ್ವರ: ಮಹದೇವಪ್ಪ

admin January 27, 2025
Spread the love

ಬೆಂಗಳೂರು: ಜನವರಿ 26ರಂದು ದೇಶದಲ್ಲಿ ಎಲ್ಲರೂ ಸಂಭ್ರಮಾಚರಣೆಯಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಾರೆ. ಆದರೆ ಈ ಗಣರಾಜ್ಯೋತ್ಸವದ ದಿನದಂದೆ ಸಂವಿಧಾನದ ಕುರಿತು ಅಪಸ್ವರ ನುಡಿದಿರುವುದು ಬೆಳಕಿಗೆ ಬಂದಿದೆ.

ಹೌದು, ಪ್ರತಿಯೊಬ್ಬ ಭಾರತಿ ಪ್ರಜೆಗಳು ಸಂವಿಧಾನವನ್ನು ಗೌರವಿಸುತ್ತೇವೆ, ಸಂವಿಧಾನವನ್ನು ನಾವೆಲ್ಲರೂ ಪಾಲಿಸುತ್ತೇವೆ. ಆದರೆ ಮತ್ತೆ ಇದೀಗ ಸಂವಿಧಾನದ ಕುರಿತಾಗಿ ಸ್ವಾಮೀಜಿ ಒಬ್ಬರು ಅಪಸ್ವರ ನುಡಿದಿರುವುದು ಕಂಡು ಬಂದಿರುವುದಕ್ಕೆ ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿರುವಂತಹ ಡಾ ಹೆಚ್ ಸಿ ಮಹದೇವಪ್ಪನವರು ಕೆಂಡಮಂಡಲವಾಗಿದ್ದಾರೆ.

ಸಂವಿಧಾನದ ಕುರಿತು ಅಪಸ್ವರ ನುಡಿದಿರುವ ಸ್ವಾಮೀಜಿಯನ್ನು ಕೂಡಲೇ ಬಂಧಿಸಬೇಕು ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಜನವರಿ 26 ರ ದಿನಾಂಕದಂದು ದೇಶದೆಲ್ಲೆಡೆ ನಾವು ಸಂವಿಧಾನ ದಿನಾಚರಣೆಯನ್ನು ಆಚರಿಸಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ ನಮನವನ್ನು ಸಲ್ಲಿಸಿದ್ದೇವೆ.

ಇಡೀ ದೇಶವೇ ಎಲ್ಲರ ಹಿತ ಕಾಯುವ ಮತ್ತು ಜನ ಸಾಮಾನ್ಯರ ಸಮಾನವಾದ ಏಳಿಗೆಯನ್ನು ಬಯಸಿದ ದೇಶದ ಸಂವಿಧಾನಕ್ಕೆ ನಮನ ಸಲ್ಲಿಸುತ್ತಿದ್ದರೆ ಅತ್ತ ಭಾರತದ ಭಾಗವೇ ಆಗಿರುವ ಉತ್ತರ ಪ್ರದೇಶದಲ್ಲಿ ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ್ ಸ್ವರೂಪ್ ಮಹಾರಾಜ್ ಅವರು ರಾಮರಾಜ್ಯ, ಮನುಸ್ಮೃತಿ, ಧರ್ಮಶಾಸ್ತ್ರ ಹಾಗೂ ಚಾಣಕ್ಯನ ಪುಸ್ತಕಗಳನ್ನು ಆಧರಿಸಿದ, 501 ಪುಟಗಳ ಸಂವಿಧಾನವನ್ನು  ಫೆಬ್ರವರಿ 3 ನೇ ತಾರೀಖಿನಂದು ಮಹಾಕುಂಭ ಮೇಳದಲ್ಲಿ ಅನಾವರಣ ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಅರಮನೆ ಮೈದಾನ ಬಳಕೆಗೆ ಸರ್ಕಾರದ ಮುಂದಿನ ನಡೆ ಏನು?

ದೇಶದಲ್ಲಿ ಎಲ್ಲರ ಹಿತ ಕಾಯುವ ಮತ್ತು ಈ ನೆಲದ ಆತ್ಮವೆಂದೇ ಹೆಸರಾದ ಸಂವಿಧಾನವು ಅಸ್ತಿತ್ವದಲ್ಲಿ ಇರುವಾಗ ಇದರ ಮಹತ್ವ ಅರಿಯದೇ ದೇಶದ್ರೋಹದ ಹೇಳಿಕೆ ನೀಡುತ್ತಿರುವ ಸ್ವಾಮೀಜಿಗಳ ಮಾತುಗಳನ್ನು ವರದಿ ಮಾಡಲಾಗಿದೆ ಬಿಟ್ಟರೆ, ಬಹುತೇಕ ಮಾಧ್ಯಮಗಳು ಅದನ್ನು ದ್ರೋಹದ ಕೃತ್ಯ ಎಂದು ಜನರಿಗೆ ತಿಳಿಸುವ ಪ್ರಯತ್ನ ಮಾಡದಿರುವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ.

ಇತ್ತೀಚೆಗಷ್ಟೇ ಸಂವಿಧಾನದ ಕುರಿತು ಅಪಸ್ವರ ಎತ್ತಿದ್ದ ಉಡುಪಿಯ ಪೇಜಾವರರ ನಂತರ ಇದೀಗ ಸ್ವಾಮೀಜಿಯ ವಲಯದಿಂದಲೇ ಮತ್ತೆ ಸಂವಿಧಾನದ ಕುರಿತು ಅಪಸ್ವರ ಎದ್ದಿದೆ. ಈ ಅಪಸ್ವರವು ಇತಿಹಾಸ ಪೂರ್ವದಿಂದಲೂ ಇದ್ದು ಇದರ ವಿರುದ್ಧವೇ ಇರುವ ನಮ್ಮೆಲ್ಲರ ಹೋರಾಟವೂ ಅಷ್ಟೇ ಐತಿಹಾಸಿಕವಾಗಿದೆ.

ಹೆಣ್ಣು ಮಕ್ಕಳ ಸಮಾನ ಹಕ್ಕುಗಳನ್ನು ತಿರಸ್ಕರಿಸುವ ಮತ್ತು ಶೋಷಿತರ ನೆರಳನ್ನೂ ಕಂಡರೆ ಅಸಹ್ಯ ಪಡುವ ಮನುಸ್ಮೃತಿ ಮತ್ತು ಮೌಢ್ಯವನ್ನೇ ಉಸಿರಾಡುವ ಧಾರ್ಮಿಕ ಗ್ರಂಥಗಳನ್ನು ಆಧರಿಸಿ ರಚಿಸಿರುವ ಸಂವಿಧಾನವು, ಸಂವಿಧಾನದ ಹೆಸರಲ್ಲಿ ರಚಿತಗೊಂಡಿರುವ ಇನ್ನೊಂದು ಮನುಸ್ಮೃತಿ ಆಗಿದ್ದು ಇದನ್ನು ಬಾಬಾ ಸಾಹೇಬರು ಸುಟ್ಟ ರೀತಿಯಲ್ಲೇ ಮತ್ತೊಮ್ಮೆ ಸುಡಬೇಕಾದ್ದು ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿ ಆಗಿದೆ.

ಇನ್ನು ಸಂವಿಧಾನದ ಮಹತ್ವದ ಅರಿಯದೇ, ವಿಷಕಾರಿಯಾಗಿ ವರ್ತಿಸುವ ಇಂತಹ ಸ್ವಾಮೀಜಿಗಳ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದಿದ್ದಾರೆ.

About the Author

admin

Administrator

Visit Website View All Posts

Spread the love

Post navigation

Previous: ನಿಯಮಗಳನ್ನೇ ಗಾಳಿಗೆ ತೂರಿ ಚರಂಡಿ ನಿರ್ಮಾಣ
Next: ಶಿವಣ್ಣನ ಆರೋಗ್ಯ ವಿಚಾರಿಸಿದ ಸಿಎಂ

Views:

25

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.