ಶಹಾಪುರ: ರಾಜ್ಯದೆಲ್ಲೇಡೆ ನಕಲಿ ದಾಖಲೆಗಳನ್ನು ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಳ್ಳುವ ಕೆಲಸ ಬಹಳ ಸಲಿಸಾಗಿ ನಡೆಯುತ್ತಿದೆ. ಆದರೆ ಜಿಲ್ಲೆಯ ಓರ್ವ ಹೈನಾತಿ ಸರ್ಕಾರದ್ದೆ ನಕಲಿ ಸಹಿ ಮಾಡಿ ಕಳ್ಳಟವಾಡುತ್ತಿದ್ದು ಜಿಲ್ಲೆಯ ಜನತೆಯನ್ನೆ ಬೆಚ್ಚಿಬೀಳಿಸುತ್ತಿದೆ. ಇದರಿಂದ ಆರೋಪಿತ ನೌಕರನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವ ಕೂಗು ಕೇಳಿಬರುತ್ತಿದೆ.
2024 ರ ಫೆ. ದಿ.16 ರಂದು ಇಲಾಖಾ ವಿಚಾರಣೆಯನ್ನು ಕೈಗೊಳ್ಳಲಾಗಿತ್ತು. ಮಂಡನಾಧಿಕಾರಿಗಳು ಶಿಸ್ತು ಪ್ರಾಧಿಕಾರದ ಪರವಾಗಿ ಸಾಕ್ಷಿಗಳ ವಿಚಾರಣೆ ಕೈಗೊಂಡಿದ್ದು, ಆರೋಪಿತ ನೌಕರನ ಮೇಲಿನ ಆರೋಪಗಳನ್ನು ರುಜುವಾತು ಪಡಿಸಲಾಗಿದೆ.
ಆರೋಪಿತ ನೌಕರ ಅರುಣ್ ಚೌವ್ಹಾಣ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ದಿ. 1.10.22 ರಂದು ಮನವಿ ಅರ್ಜಿ ಸಲ್ಲಿಸಿ ಕಚೇರಿಯಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಹಾಜರಾಗಲು ಅನುಮತಿಸಲು ಮನವಿ ಸಲ್ಲಿಸಿದ್ದು, ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಸ್ನೇಹಲ್ ಆರ್. ಅವರು ಮನವಿಯ ಅರ್ಜಿಯ ಮೇಲೆ ಹಾಜರಾಗುವಂತೆ ಟಿಪ್ಪಣಿ ನಮೂದಿಸಿದ್ದಾರೆ. ಸರ್ಕಾರದಿಂದಲೇ ನಕಲಿ ವರ್ಗಾವಣೆ ಆಧೇಶ ಪ್ರತಿಯನ್ನು ಸೃಷ್ಠಿಸಿ ಜಿಲ್ಲಾ ವರದಿ ಮಾಡಿಕೊಳ್ಳುವುದರ ಮೂಲಕ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಇದನ್ನೂ ಓದಿ: ಕಾರ್ಯಕರ್ತರ ರಕ್ಷಣೆ ಮಾಡುವುದು ನನ್ನ ಮೊದಲ ಕರ್ತವ್ಯ: ಡಿಕೆಶಿ
ಆರೋಪಿ ಪ್ಲಾನ್
ಅರುಣ್ ಕುಮಾರ ಎಂಬ ಆರೋಪಿತ ನೌಕರ ಸರ್ಕಾರದ ಹುದ್ದೆ ಪಡೆಯಬೇಕು ಎಂಬ ದುರಾಸೆಗೆ ಇಡೀ ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಾರ್ಯಲಯ (ಜಿಲ್ಲಾ ನಗರಾಭಿವೃದ್ದಿ ಕೋಶ ರಾಯಚೂರ) ಜಿಲ್ಲಾ ನಗಾರಾಭಿವೃದ್ದಿ ಕೋಶ ಯೋಜನ ನಿರ್ಧೇಶಕ ಜಗದೀಶ ಗಂಗಣ್ಣವರ ಕೆ.ಎ.ಎಸ್ ಇವರ ಸಮಕ್ಷಮ ಮೇರೆಗೆ ಇಲಾಖೆಯ ಅಧಿಕಾರಿಗಳು ಆರೋಪದ ಪಟ್ಟಿಯನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ಶಿಸ್ತು ಪ್ರಾಧಿಕಾರವು ಆರೋಪಿತ ನೌಕರನ ಮೇಲಿನ ಆರೋಪಗಳನ್ನು ರುಜುವಾತು ಪಡಿಸಿದ್ದಾರೆ.
ಆರೋಪಿತ ನೌಕರ ಅರುಣ್ ಚವ್ಹಾಣ ಪ್ರಸ್ತುತ ಕೆಂಭಾವಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆಗೆ ಸಿಕ್ಕ ಸಾಕ್ಷಾ ಪುರಾವೆಗಳ ಹಿನ್ನಲೇ ಇಲಾಖೆಯು 21.5.2024 ರಂದು ಕಾರಣ ಕೇಳಿ ಎರಡನೇ ನೋಟಿಸ್ ಜಾರಿ ಮಾಡಿದ್ದು ಇದಕ್ಕೆ ಯಾವುದೇ ಅಳುಕಿಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾನೆ.
ಆರೋಪಿತ ನೌಕರನು ಸರ್ಕಾರಕ್ಕೆ ಮಾಡಿದ ವಂಚನೆ ಬಗ್ಗೆ ಈಗಾಗಲೇ ಪ್ರಜಾವಾಹಿನಿ ಪತ್ರಿಕೆ ಹಾಗೂ ಸೋಶಿಯಲ್ ಮಾಧ್ಯಮಗಳಲ್ಲಿ ಸಾಲು ಸಾಲು ವರದಿಗಳು ಸಹ ಪ್ರಕಟವಾಗುತ್ತಿವೆ. ಮತ್ತು ಈ ಬಗ್ಗೆ ಸಾಕ್ಷಾ ಪುರಾವೆಗಳು ಇದ್ದರು ಸಹ ಕಣ್ಣಾಮುಚ್ಚಾಲೆ ಆಟಗಳು ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು, ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ಪತ್ರ ಸಹ ಸಲ್ಲಿಸಲಾಗಿದೆ.
