ಶಹಾಪುರ: ನಗರದ ಚರಬಸವೇಶ್ವರ ಕಲ್ಯಾಣ ಮಂಟಪದ ಅಶ್ವೀನಿ ಗುರುಸ್ವಾಮಿ ಸನ್ನೀಧಿಯಲ್ಲಿ ಶ್ರೀ ಸ್ವಾಮಿ ಅಯ್ಯಪ್ಪ ಮಾಲಾಧಾರಿಗಳಿಂದ ಇರುಮುಡಿ ಪೂಜಾ ಮಹೋತ್ಸವ ಕಾರ್ಯಕ್ರಮ ಜರುಗಿತು. ಸುಮಾರು 35 ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತ ಬರುತ್ತಿದೆ.
ಅಶ್ವೀನಿ ಗುರುಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಪೂಜೆಗಾಗಿ ಸುಂದರ ಮಂಟಪ ನಿರ್ಮಿಸಲಾಗಿತ್ತು. ಮಂಟಪದ ಎಡ ಬದಿಯಲ್ಲಿ ಸಂಕಷ್ಟ ನಿವಾರಕ ಗಣೇಶ, ಶ್ರೀ ಧರ್ಮಶಾಸ್ತ್ರ ಅಯ್ಯಪ್ಪಸ್ವಾಮಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಇರುಮುಡಿ ಹೊತ್ತಾಗ 18 ಮೆಟ್ಟಿಲು ಏರಿಯೇ ಸಾಗಭೇಕು ಹೀಗಾಗಿ ಅಯ್ಯಪ್ಪಸ್ವಾಮಿ ಮುಂಭಾಗದಲ್ಲಿ 18 ನಂದಾದೀಪ ಬೆಳಗಿಸಿ ಹೂ, ಹಣ್ಣು, ಕರ್ಪುರಗಳಿಂದ ವಿಶೇಷವಾದ ಪೂಜೆ ಸಲ್ಲಿಸಲಾಯಿತು. ನಗರದಿಂದ ಪ್ರತಿ ವರ್ಷ ಅನೇಕ ಭಕ್ತರು ಹರಕೆ ಹೊತ್ತು ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುತ್ತಾರೆ. ಕೇಲ ಭಕ್ತರಿಂದ ತುಪ್ಪದ ಕಾಯಿಯನ್ನು ತುಂಬಿಸಿ ಅಯ್ಯಪ್ಪ ಸ್ವಾಮಿಗಳ ಜೊತೆಯಲ್ಲಿ ಕಳುಹಿಸಲಾಗುತ್ತದೆ. ಇದನ್ನೂ ಓದಿ: ನೂತನ ಪೊಲೀಸ್ ಠಾಣೆಗಳ ಉದ್ಘಾಟನೆ
ಭಜನೆ ಮತ್ತು ಅಯ್ಯಪ್ಪ ಸ್ವಾಮಿಯ ಹಾಡುಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಸಂತೋಷ ಪತ್ತಾರ ಮತ್ತು ಅಶೋಕ ಸುಗಂಧಿ ಅಯ್ಯಪ್ಪನ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಮತ್ತು ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು ಬಿ ಗದ್ದುಗೆ ಬೇಟಿ ನೀಡಿ ದರ್ಶನ ಪಡೆದರು. ಮಹಾ ಅನ್ನಸಂತರ್ಪಣೆ ಜರುಗಿತು. ಬಳಿಕ ಮಾಲಾದಾರಿಗಳು ವಾಹನದ ಮೂಲಕ ಶಬರಿ ಮಲೆಗೆ ತೆರಳಿದರು. ಹನುಮ ಮಾಲಾಧಾರಿಗಳು ಸಹ ಪಾಲ್ಗೊಂಡು ಭಕ್ತರ ಸೇವೆಯಲ್ಲಿ ತೊಡಗಿಕೊಂಡಿದ್ದರು.
ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸುಮಾರು 48 ದಿನಗಳ ಕಾಲ ಗಾಳಿ, ಚಳಿ, ಮಳೆ ಎನ್ನದೇ ದಿನನಿತ್ಯ ಸ್ವಾಮಿಯನ್ನು ಭಕ್ತಿಯಿಂದ ಭಜಿಸುತ್ತಾರೆ. ಜನವರಿ ತಿಂಗಳಲ್ಲಿ ಮಕರ ಸಂಕ್ರಾತಿಯ ಸಮಯದಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಇರುಮುಡಿಯನ್ನು ಹೊತ್ತು ಶಬರಿಮಲೈಗೆ ತೆರಳಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಇದರಿಂದ ಸ್ವಾಮಿ ಅಯ್ಯಪ್ಪನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿಂದ ಮಾಲೆಯನ್ನು ಧರಿಸಿ ಸ್ವಾಮಿಯ ದರ್ಶನಕ್ಕಾಗಿ ತೆರಳುತ್ತಾರೆ ಎಂದು ಅಶ್ವೀನಿ ಗುರುಸ್ವಾಮಿಗಳು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಪ್ಪಣ್ಣ ದಶವಂತ, ಸಂತೋಷ ಗುತ್ತೇದಾರ, ಮೌನೇಶ ಹಳಿಸಗರ, ವೆಂಕಟೇಶ ಬೋನೆರ, ಅಂಬ್ರೇಶ ದೊಡ್ಮನಿ, ಬಸ್ಸು ಹೈಯಾಳ, ಉದಯ ಟೊಣಪೆ, ಬಸವರಾಜ ಕಡಗಂಚಿ, ಸೇರಿದಂತೆ ವಿವಿಧ ಬಡವಣೆಗಳಿಂದ ಭಕ್ತರು ಆಗಮಿಸಿದ್ದರು.
