ಮೆಟ್ರೋ ತಡೆಗೋಡೆ ಕುಸಿತ 7 ಕಾರುಗಳು ಜಖಂ

ಮೆಟ್ರೋ ತಡೆಗೋಡೆ ಕುಸಿತ 7 ಕಾರುಗಳು ಜಖಂ

ಬೆಂಗಳೂರು: ನಗರದ ಫ್ಲಾಟ್ ಫಾರ್ಮ್ ರಸ್ತೆ ಜಕ್ಕರಾಯನಕೆರೆ ಬಳಿ ಶೇಷಾದ್ರಿಪುರಂ ಜೆಡಿಎಸ್ ಕಚೇರಿ ಜೆಪಿ ಭವನದ ಮುಂದೆ ಬುಧವಾರ ರಾತ್ರಿ ಮೆಟ್ರೋ ಗೋಡೆ ಮಳೆ ಮತ್ತು ಗಾಳಿಗೆ ಉರುಳಿ ಕಾರು ಮತ್ತು ಬೈಕ್ ಜಕಮ್ ಗೊಂಡಿದ್ದು ಗುರುವಾರ  ತೆರವು ಗೊಳಿಸುತ್ತಿದ್ದಾರೆ

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಭಾರೀ ಅವಾಂತರ ಸೃಷ್ಟಿ ಮಾಡಿದೆ. ಸತತವಾಗಿ ಸುರಿದ ಮಳೆಗೆ ಬೆಂಗಳೂರು ಮೆಟ್ರೋ ತಡೆಗೋಡೆ ಕುಸಿದಿದ್ದು, 7 ಕಾರುಗಳು ಜಖಂಗೊಂಡಿದೆ.

ಮೆಟ್ರೋ ತಡೆಗೋಡೆ ಕುಸಿತದಿಂದ 7 ಕಾರುಗಳು ಜಖಂಗೊಂಡಿದೆ. ತಡೆಗೋಡೆಯ ಪಕ್ಕದಲ್ಲಿ ಅನೇಕ ಕಾರುಗಳನ್ನು ನಿಲ್ಲಿಸಲಾಗಿತ್ತು. ಬೆಂಗಳೂರಿನ ಜೆಡಿಎಸ್ ಕಚೇರಿ ಮುಂಭಾಗದಲ್ಲಿ ತಡೆಗೋಡೆ ಕುಸಿದಿದ್ದು, ಕಾರುಗಳು ಜಖಂಗೊಂಡಿದೆ.

ಮಲ್ಲೇಶ್ವರಂ, ಎಸ್ ಜೆ ಪಿ ರಸ್ತೆಯುದ್ದಕ್ಕೂ ಮಳೆ ನೀರು ನಿಂತಿದ್ದು, ಮಳೆ ನೀರಿನಲ್ಲಿ ಹೋಗಲಾಗದೆ ವಾಹನ ಸವಾರರು ಪರದಾಡಿದ್ದಾರೆ. ಸುಮಾರು ಮೂರು ನಾಲ್ಕು ಅಡಿಯಷ್ಟು ಮಳೆ ನೀರು ನಿಂತಿದೆ.

ಧಾರಾಕಾರ ಮಳೆಗೆ ಶಾಂತಿನಗರದ ವಿಲ್ಸನ್ ಗಾರ್ಡನ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ನಿಂತಿದೆ. ಮಳೆ ಬಂದ್ರೆ ಬೆಂಗಳೂರು ಜನರ ಸ್ಥಿತಿ ಹೇಳತೀರದಾಗಿದೆ.

 

Related