ರಾಯರ 350ನೇ ಮಹೋತ್ಸವ

  • In State
  • August 27, 2021
  • 513 Views
ರಾಯರ 350ನೇ ಮಹೋತ್ಸವ

ಶಿಡ್ಲಘಟ್ಟ : ನಗರದ ಮುತ್ತೂರು ಬೀದಿಯಲ್ಲಿರುವ ಗುರು ರಾಘವೇಂದ್ರರ ಮಠದಲ್ಲಿ 350ನೇ ಆರಾಧನಾ ಮಹೋತ್ಸವನ್ನು ಆಚರಿಸುತ್ತಿದ್ದೇವೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ನ ಅಧ್ಯಕ್ಷ ಎಸ್.ವಿ.ನಾಗರಾಜ ರಾವ್ ಗುರುವಾರ ತಿಳಿಸಿದರು.

36 ವರ್ಷಗಳಿಂದ ಸತತವಾಗಿ ಗುರು ರಾಘವೇಂದ್ರರ ಆರಾಧನೆ ಮಾಡುತ್ತಿದ್ದು, ರಾಯರ ಮೂರುದಿನಗಳ ಆರಾಧನೆಯನ್ನು ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ಎಂದು ಕರೆಯಲಾಗುತ್ತದೆ. ಕೊರೋನಾ ಕಾರಣದಿಂದಾಗಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಭಕ್ತರು ರಾಯರ ದರ್ಶನ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ಶ್ರೀ ರಾಘವೇಂದ್ರ ಸ್ವಾಮಿಗಳ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಸ್.ವಿ.ನಾಗರಾಜರಾವ್ ಕಾರ್ಯದರ್ಶಿ ಎನ್. ಶ್ರೀಕಾಂತ್, ಖಜಾಂಚಿ ಎ.ಎಸ್. ಶಂಕರ್ ರಾವ್, ಬ್ರಾಹ್ಮಣ ಸಂಘದ ಅಧ್ಯಕ್ಷರು ಎ.ಎಸ್.ರವಿ , ಎಂ.ವಾಸುದೇವ್ ರಾವ್, ಆರ್. ಮಧುಸೂಧನ್, ಬಿ.ಕೃಷ್ಣಮೂರ್ತಿ , ಬಿ.ಆರ್ ಸುಧೀಂದ್ರ, ಎನ್. ಆರ್.ನಿರಂಜನ್, ಬ್ರಾಹ್ಮಣ ಯುವಕ ಸಂಘ, ಗಾಯಿತ್ರಿ, ಮಹಿಳಾ ಮಂಡಳಿ ಸದಸ್ಯರು ಇನ್ನಿತರರಿದ್ದರು.

Related