ತುಮಕೂರಿಗೆ 3 ರೈಲ್ವೆ ಕಾಮಗಾರಿ ಮಂಜೂರು

ತುಮಕೂರಿಗೆ 3 ರೈಲ್ವೆ ಕಾಮಗಾರಿ ಮಂಜೂರು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ತುಮಕೂರು ಜಿಲ್ಲೆಗೆ ಅದರದೇ ಆದ ಮಹತ್ವ ಮತ್ತು ಒಳ್ಳೆಯ ಹೆಸರಿದೆ. ಇನ್ನು ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವ ವಿ ಸೋಮಣ್ಣ ಅವರು ಇದೀಗ ತುಮಕೂರು ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ.

ಹೌದು, ಕೇಂದ್ರ ಸಚಿವರಾಗಿರುವಂತ ವಿ ಸೋಮಣ್ಣ ಅವರು ತುಮಕೂರು ಜಿಲ್ಲೆಯಲ್ಲಿ ಮತ್ತೆ ಎರಡು ರಸ್ತೆ ಕೆಳ ಸೇತುವೆ ಹಾಗೂ ಒಂದು ರಸ್ತೆ ಮೇಲ್ಸೇತುವೆಯನ್ನು ರೈಲ್ವೆ ಇಲಾಖೆ ಮಂಜೂರು ಮಾಡಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಧರಣಿ

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಈ ಕಾಮಗಾರಿಗಳ ಮೊತ್ತ 60 ಕೋಟಿ. ರೂ. ಆಗಿದ್ದು ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ರೈಲ್ವೆ ವಿ.ಸೋಮಣ್ಣ ತಿಳಿಸಿದ್ದಾರೆ.

ಕಲ್ಲಿಪಾಳ್ಯ ರೋಡ್ (ರಸ್ತೆ ಕೆಳ ಸೇತುವೆ 13.44 ಕೋಟಿ ರೂ.), ಬೆಂಚಗೆರೆ ಗೇಟ್ (ರಸ್ತೆ ಮೇಲ್ಸೇತುವೆ 36.62 ಕೋಟಿ ರೂ.), ಬಂಡಿಹಳ್ಳಿ ರೋಡ್ ಗೇಟ್ (ರಸ್ತೆ ಕೆಳ ಸೇತುವೆ 10.01 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದಿದ್ದಾರೆ.

Related