ಕೊನೆಗೂ ಸಿಕ್ಕಿಬಿದ್ದ ಆ್ಯಸಿಡ್ ನಾಗ..!!

  • In Crime
  • May 14, 2022
  • 32 Views

Bengaluru Acid Attack Case: ಎಸ್ಕೇಪ್ ಆಗಲು ಪ್ರಯತ್ನಿಸಿ ಗುಂಡೇಟು ತಿಂದು ಆಸಿಡ್ ನಾಗ ಬಿಜಿಎಸ್ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಬಂಧನದ ಬಳಿಕ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದು, ಆಸಿಡ್ ನಾಗೇಶನ ಮಾತುಗಳನ್ನು ಕೇಳಿ ಪೊಲೀಸರೇ ಒಂದು ಕ್ಷಣ ಶಾಕ್ ಆಗದ್ದರು ಎಂದು ತಿಳಿದು ಬಂದಿದೆ. ಆಸಿಡ್ ಹಾಕುವಾಗ ನಾಗೇಶ್ ಕೈಗೆ ಗಾಯ ಮಾಡಿಕೊಂಡಿದ್ದನು. ತನ್ನ ಕೈ ನೋಡಿದಾಗಲೆಲ್ಲ ಯುವತಿ ಅಳೋದು ನೆನಪಾಗಬೇಕು ಎಂದು ಹೇಳಿಕೊಂಡಿದ್ದಾರೆ. ಪೊಲೀಸರು ಏನು ಕೈ ಗಾಯ ಅಂದ್ರೆ, ನನ್ನ ಕೈ ನೋಡಿಕೊಂಡಾಗ ಅವಳು ಅಳೋದು ನೆನಪಾಗುತ್ತೆ ಎಂದು ತನ್ನ ವಿಕೃತ ಮನಸ್ಸಿನ ಭಾವನೆಯನ್ನ ತೆರೆದಿಟ್ಟಿದ್ದಾನೆ.


ಆಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ. ಏಳು ವರ್ಷದಿಂದ ಕಾಯ್ತಿದ್ದೀನಿ ಮದುವೆಯಾಗೋಣ ಅಂತಾ ಕೇಳಿದೆ. ಆದರೆ ಅವಳು ನನ್ನನ್ನು ಅಣ್ಣ ಎಂದು ಕರೆದು ಮದುವೆ ನಿಶ್ಚಯವಾಗಿದೆ ಎಂದು ಹೇಳಿದಳು. ಇದರಿಂದ ನನಗೆ ಕೋಪ ಬಂತು. ಅಂದೇ ಅಂಗಡಿಗೆ ಹೋಗಿ ಆಸಿಡ್ ಖರೀದಿ ಮಾಡಿದೆ ಎಂದು ಹೇಳಿದ್ದಾನೆ.

ಆದ್ರೆ ನನಗೆ ಆಸಿಡ್ ಹಾಕಬೇಕು ಅಂತ ಅಂದುಕೊಂಡಿರಲಿಲ್ಲ. ಯಾವಾಗ ಅವರ ಮನೆಯವರು ಪ್ರವೋಕ್ ಮಾಡಿದ್ರೊ ಆಗ ಹಾಕಿದೆ. ನೀವು ಹುಡುಕ್ತಿರ್ತೀರಾ ಅಂತಾ ಗೊತ್ತಿತ್ತು ಸರ್. ಮೂರು ಹೊತ್ತು ಊಟ ಜೈಲಲ್ಲಿದ್ರೂ ಹಾಕ್ತಾರೆ. ಧ್ಯಾನ ಮಾಡ್ಕೊಂಡು ಭಿಕ್ಷೆ ಬೇಡಿಕೊಂಡು ಬದುಕಿದ್ರೆ ಆಯ್ತು ಅಂತಾ ನಿರ್ಧಾರ ಮಾಡಿದೆ ಎಂದು ಹೇಳಿದನು.

Related