ಹುಟ್ಟು ಹಬ್ಬದಿನದಂದೇ ಶವವಾಗಿ ಪತ್ತೆಯಾದ ನಟಿ ಶಹಾನಾ..!! ಪತಿ ಪೊಲೀಸ್ ವಶ

  • In Crime
  • May 13, 2022
  • 41 Views

ಖ್ಯಾತ ರೂಪದರ್ಶಿ ಮತ್ತು ನಟಿ ಶಹಾನಾ(Shahana) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕೇರಳ ಮೂಲದ 20 ವರ್ಷದ ನಟಿ ಶಹಾನಾ ಕೋಝಿಕೋಡ್ ನಲ್ಲಿರುವ ತನ್ನ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಶಹಾನಾ ಕಾಸರಗೋಡಿನ ಚೆರುವತ್ತೂರು ನಿವಾಸಿ ಅಲ್ತಾಫ್ ಎಂಬುವವರ ಪುತ್ರಿ. ರಾತ್ರಿ 11 ಗಂಟೆಗೆ ಪರಂಬಿಲ್ ಬಜಾರ್ ನಲ್ಲಿರುವ ಬಾಡಿಗೆ ಫ್ಲಾಟ್ ನಲ್ಲಿ ಶಹಾನಾ ಶವ ಕಿಟಕಿಯ ಗ್ರಿಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ. ಈ ಹಿನ್ನೆಲೆ ನೆರೆಮನೆಯವರೆ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಹಾನಾ ತಾಯಿ ನನ್ನ ಮಗಳು ಯಾವಾಗಲೂ ತನ್ನ ಪತಿಯಿಂದ ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿದ್ದರು ಎಂದು ದೂರುತ್ತಿದ್ದಳು. ಶಹಾನಾ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ.

Related