ಜನತಾ ಜಲಧಾರೆ ಯಶಸ್ಸಿಗಾಗಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ: ಹೆಚ್.ಡಿ ಕುಮಾರಸ್ವಾಮಿ

ಜನತಾ ಜಲಧಾರೆ ಯಶಸ್ಸಿಗಾಗಿ  ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ: ಹೆಚ್.ಡಿ ಕುಮಾರಸ್ವಾಮಿ

ಮೈಸೂರು: ಬೆಂಗಳೂರಿನ ಹೊರವಲಯದಲ್ಲಿ  ನಡೆಯುತ್ತಿರುವ ಜೆಡಿಎಸ್‍ ನ ಮಹತ್ವಾಕಾಂಕ್ಷೆಯ ಜನತಾ ಜಲಧಾರೆ ಸಮಾವೇಶ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕುಮಾರಸ್ವಾಮಿ ಅವರ  ಜೊತೆ ಜೆಡಿಎಸ್ ನ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕೆ ಬೆಂಗಳೂರಿನ ಹೊರವಲಯದ ನೆಲಮಂಗಲದಲ್ಲಿ ಇಂದು ನಡೆಯುವ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿ ಆಗಲೆಂದು ತಾಯಿ ಚಾಮುಂಡೇಶ್ವರಿಯನ್ನು ಬೇಡಿದ್ದೇನೆ. ತಾಯಿ ಅನುಗ್ರಹದಿಂದ ಸಮಾವೇಶ ಯಶಸ್ವಿ ಆಗುತ್ತದೆ ಎಂದರು.

ನಮ್ಮ ಜೆಡಿಎಸ್ ಪಕ್ಷದ ಜನತಾ ಜಲಧಾರೆ ವಾಹನದ ಮೂಲಕ ನಾಡಿನ ನೀರಾವರಿ ಯೋಜನೆ ಹಾಗೂ ಜೆಡಿಎಸ್ ಪಕ್ಷದ ನೀರಾವರಿ ಯೋಜನೆಗಳ ಕನಸ್ಸನ್ನು ರಾಜ್ಯಾದ್ಯಂತ ಜನತೆಗೆ ತಿಳಿಸಲಾಗಿದೆ ಎಂದು ಹೇಳಿದರು.

 

 

 

Related