ರಮ್ಯಾ ಮಾತಿನಿಂದ ನನಗೆ ಸಂತೋಷವಾಗ್ತಿದೆ : ಡಿಕೆಶಿ ವಿರುದ್ದ ಅಶ್ವಥ್ ನಾರಾಯಣ ಹೇಳಿಕೆ

ಬೆಂಗಳೂರು (ಮೇ.13): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಅಶ್ವತ್ಥ ನಾರಾಯಣ ನಡುವಿನ ವಾಕ್​ ಸಮರ ಮುಂದುವರಿದೆ. PSI ನೇಮಕಾತಿ ವಿಚಾರದಲ್ಲಿ ಆರಂಭವಾದ ಯುದ್ಧ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಸಚಿವ ಅಶ್ವತ್ಥ ನಾರಾಯಣ, ಕಾಂಗ್ರೆಸ್​ ನಾಯಕ ಎಂ.ಬಿ ಪಾಟೀಲ್​ರನ್ನು ಭೇಟಿಯಾದ ಬಳಿಕ ನಟಿ ರಮ್ಯಾ ಮಾಡಿದ ಟ್ವೀಟ್ ಬಿಜೆಪಿ ನಾಯಕರಿಗೆ ವರವಾಗಿದೆ. ಡಿಕೆಶಿ ವಿರುದ್ಧ ಟ್ವೀಟ್​ ಮಾಡಿದ ರಮ್ಯಾ ಅಭಿಪ್ರಾಯಕ್ಕೆ ಸಚಿವ ಅಶ್ವತ್ಥ ನಾರಾಯಣ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಕುರಿತ ರಮ್ಯಾ ಮಾತಿಂದ ನನಗೆ ಸಂತೋಷ ಆಗ್ತಿದೆ ಎಂದ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.


ರಮ್ಯಾ ಟ್ವೀಟ್​ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಸಚಿವ ಅಶ್ವತ್ಥ ನಾರಾಯಣ, ಇದು ಕಾಂಗ್ರೆಸ್​ನವರ ಆಂತರಿಕ ವಿಚಾರ, ಆದರೂ ಮಾಧ್ಯಮಗಳು ನನ್ನನ್ನೂ ಇದರಲ್ಲಿ ಸೇರಿಸಿದ್ದೀರಿ, ಎಂದು ಡಿ.ಕೆ ಶಿವಕುಮಾರ್​ ವಿರುದ್ಧ ಕಿಡಿಕಾರಿದ್ರು. ಡಿ.ಕೆ ಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡಿದ್ದು ಅವರ ತಪ್ಪು, ನನ್ನನ್ನ ಟಚ್ ಮಾಡಿಕೊಂಡು ಅಯ್ಯೋ ಪಾಪ ಅನ್ನೋ ಪರಿಸ್ಥಿತಿ ಡಿ.ಕೆ ಶಿವಕುಮಾರ್​ಗೆ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

Related