ವಿದೇಶದ ಸೆಲ್ಫಿ ಪೋಟೊ ಹಂಚಿಕೊಂಡ ಮುಸ್ಕಾನ್ ತಂದೆ

  • In Crime
  • May 12, 2022
  • 27 Views
ವಿದೇಶದ ಸೆಲ್ಫಿ ಪೋಟೊ ಹಂಚಿಕೊಂಡ ಮುಸ್ಕಾನ್ ತಂದೆ

ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡದೇ, ಕುಟುಂಬಸ್ಥರ ಜೊತೆ ವಿದೇಶಕ್ಕೆ ಹಾರಿದ್ದಾಳೆ. ಮದೀನಾದಿಂದ ಆಕೆಯ ತಂದೆ ಸೆಲ್ಫಿ ವಿಡಿಯೋ ಕಳಿಸಿದ್ದಾರೆ.
ಮಂಡ್ಯ: ಹಿಜಾಬ್ ವಿವಾದ ಸದ್ಯಕ್ಕೆ ತಣ್ಣಗಾಗಿದೆ. ಆದರೆ ಹಿಜಾಬ್ ಗಲಾಟೆ ವೇಳೆ ಅಲ್ಲಾ ಹು ಅಕ್ಬರ್ ಅಂತ ಕೂಗಿ ಭಾರೀ ಸುದ್ದಿ ಮಾಡಿದ್ದ ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಈಗ ಮತ್ತೆ ಸುದ್ದಿ ಮಾಡಿದ್ದಾಳೆ.

“ಜೈ ಶ್ರೀರಾಮ್” ಎಂದವರ ಎದುರು “ಅಲ್ಲಾ ಹು ಅಕ್ಬರ್” ಅಂತ ಕೂಗುತ್ತಿದ್ದ  ಮುಸ್ಕಾನ್ ವಿಡಿಯೋ ಹಾಗೂ ಫೋಟೋ ಸಖತ್ ವೈರಲ್ ಆಗಿತ್ತು. ಮುಸ್ಕಾನ್‌ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಮರುದಿನ ಆಕೆ ನಿವಾಸಕ್ಕೆ ಭೇಟಿ ನೀಡಿದ್ದ ಮುಸ್ಲಿಂ ಮುಖಂಡರು, ರಾಜಕಾರಣಿಗಳು, ವಿವಿಧ ಸಂಘಟನೆ ಮುಖ್ಯಸ್ಥರು ಆಕೆಗೆ ಹಣಕಾಸಿನ ಸಹಾಯ ಮಾಡಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ  ಅಲ್ ಖೈದಾ ಉಗ್ರ ಸಂಘಟನೆ ಮುಖ್ಯಸ್ಥ  ಅಯ್ಮಾನ್ ಅಲ್ ಜವಾಹಿರಿ ಕೂಡ ಆಕೆಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿ, ಶ್ಲಾಘನೆಯ ವಿಡಿಯೋ ಪ್ರಸಾರ ಮಾಡಿದ್ದ. ಈ ವೇಳೆ ಆಕೆ ವಿರುದ್ಧ ತನಿಖೆ ನಡೆಸುವಂತೆ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಆಗ್ರಹಿಸಿದ್ದವು. ಇದೀಗ ವಿದ್ಯಾರ್ಥಿನಿ ಮುಸ್ಕಾನ್ ಏಕಾಏಕಿ ತಮ್ಮ ಕುಟುಂಬಸ್ಥರ ಜೊತೆ ದುಬೈಗೆ ಹಾರಿದ್ದಾಳೆ.

ಕಳೆದ ತಿಂಗಳು ಅಂದರೆ ಏಪ್ರಿಲ್ 25ರಂದೇ ಮುಸ್ಕಾನ್ ಕುಟುಂಬದವರು ಧಾರ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಮೆಕ್ಕಾ ಭೇಟಿಗೆ ಸೌದಿಗೆ  ತೆರಳಿರುವ ಕುಟುಂಬಸ್ಥರು ಮೇ 18ರಂದು ವಾಪಾಸ್ಸಾಗುವ ಮಾಹಿತಿ ಇದೆ. ಆದ್ರೆ ಮುಸ್ಕಾನ್ ಕುಟುಂಬದ ವಿದೇಶ ಪ್ರವಾಸ ಈಗ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾಕೆಂದರೆ ಅಲ್ಲಾ ಹು ಅಕ್ಬರ್ ಘೋಷಣೆ ಬಳಿಕ ದೇಶದಾದ್ಯಂತ ಚರ್ಚೆಗೆ ಬಂದಿದ್ದ ಮುಸ್ಕಾನ್, ಇದೀಗ ಪೊಲೀಸರಿಗೆ ಮಾಹಿತಿ ನೀಡದೆ ವಿದೇಶ ಪ್ರವಾಸ ಕೈಗೊಂಡಿದ್ದಾಳೆ ಎನ್ನಲಾಗಿದೆ.

Related