ಟಾರ್ಗೆಟ್ ರೀಚ್ ಮಾಡಲು ಹೋಗಿ ಆರೋಗ್ಯ ಇಲಾಖೆಯ ಮಹಾ ಎಡವಟ್ಟು !!

ಟಾರ್ಗೆಟ್ ರೀಚ್ ಮಾಡಲು ಹೋಗಿ ಆರೋಗ್ಯ ಇಲಾಖೆಯ ಮಹಾ ಎಡವಟ್ಟು !!

ಕೊರೋನಾ ಲಸಿಕೆಗೆಂದೆ ಕೇಂದ್ರ ಸರಕಾರ ಕೋಟ್ಯಾಂತರ ರೂಪಾಯಿ ಹಣ ಖರ್ಚು  ಮಾಡುತ್ತಿದೆ. ಆದರೆ, ಆರೋಗ್ಯ ಇಲಾಖೆಯು ತಪ್ಪು ಮಾಡುತ್ತಿದೆ.ಕೊವೀಡ್ ಎರಡನೇ ಡೋಸ್ ಲಸಿಕೆ ನೀಡುವ ವೇಳೆಯು ಎಡವಟ್ಟು ಮಾಡಿತ್ತು ಈಗ ಮತ್ತೆ ಬೂಸ್ಟರ್ ಡೋಸ್ ನೀಡುವಲ್ಲಿ ತಪ್ಪು ಮಾಡುತ್ತಿದೆ.
ಯಾದಗಿರಿ(ಮೇ.12): ಟಾರ್ಗೆಟ್ ರೀಚ್ ಮಾಡಲು ಹೋಗಿ ಆರೋಗ್ಯ ಇಲಾಖೆಯು ಮಹಾ ಎಡವಟ್ಟು ಮಾಡಿಕೊಂಡಿದೆ.

ಸತ್ತವರಿಗು ಇಲಾಖೆಯು ಕೊವೀಡ್ ಲಸಿಕೆ ನೀಡುತ್ತಿದ್ದೆನಾ ಎಂಬ ಅನುಮಾನ ಕಾಡುತ್ತಿದೆ. ಸತ್ತ ವ್ಯಕ್ತಿಗಳಿಗೆ ಅದು ಹೇಗೆ ಲಸಿಕೆ ನೀಡುತ್ತಿದೆ ಎಂಬುದು ಅಕ್ರೋಶಕ್ಕೆ ಕಾರಣವಾಗಿದೆ.ಕೊವೀಡ್ ನಿಂದ ಮೃತ ಪಟ್ಟ ವ್ಯಕ್ತಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಎಂದು ಮೆಸೇಜ್ ಬಂದಿದ್ದು ಮೃತ ಕುಟುಂಬಸ್ಥರ ಅಕ್ರೋಶಕ್ಕೆ ಕಾರಣವಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮುರಾರಿ ರಾವ್ ಶಿಂಧೆ ಹೆಸರಿನಲ್ಲಿ ಬೂಸ್ಟರ್ ಡೋಸ್ ಪಡೆದ ಬಗ್ಗೆ ಮೆಸೇಜ್ ಬಂದಿದೆ. ಯಾದಗಿರಿ ಜಿಲ್ಲೆಯಲ್ಲಿ ಕೊವೀಡ್ ಲಸಿಕೆ ನೀಡಿದ್ದ ಬಗ್ಗೆ ಟಾರ್ಗೆಟ್ ರೀಚ್ಮಾಡಲು ಆರೋಗ್ಯ ಇಲಾಖೆಯು ಮುಂದಾಗಿದ್ದು ,ನಿಜವಾಗಿ ಕೊವೀಡ್ ಲಸಿಕೆ ನೀಡಿ ಗುರಿ ಸಾಧಿಸಬೇಕಾದ ಆರೋಗ್ಯ ಇಲಾಖೆಯು ಲಸಿಕೆ ನೀಡದೇ ಟಾರ್ಗೆಟ್ ರೀಚ್ ಮಾಡುವ ಸಾಹಸಕ್ಕೆ ಕೈಹಾಕಿದೆ.

ಕೊರೋನಾ ಲಸಿಕೆಗೆಂದೆ ಕೇಂದ್ರ ಸರಕಾರ ಕೋಟ್ಯಾಂತರ ರೂಪಾಯಿ ಹಣ ಖರ್ಚು  ಮಾಡುತ್ತಿದೆ. ಆದರೆ, ಆರೋಗ್ಯ ಇಲಾಖೆಯು ತಪ್ಪು ಮಾಡುತ್ತಿದೆ.ಕೊವೀಡ್ ಎರಡನೇ ಡೋಸ್ ಲಸಿಕೆ ನೀಡುವ ವೇಳೆಯು ಎಡವಟ್ಟು ಮಾಡಿತ್ತು ಈಗ ಮತ್ತೆ ಬೂಸ್ಟರ್ ಡೋಸ್ ನೀಡುವಲ್ಲಿ ತಪ್ಪು ಮಾಡುತ್ತಿದೆ. ಎಲ್ಲೋ ಕಚೇರಿಯಲ್ಲಿ ಕುಳಿತು ಸಿಕ್ಕ ಸಿಕ್ಕವರ ಮೊಬೈಲ್ ಪಡೆದು ಲಸಿಕೆ ನೀಡಿದ್ದ ಬಗ್ಗೆ ದಾಖಲೆ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ.

Related