ಗೃಹ ಸಚಿವರೊಂದಿಗೆ ಸಿಎಂ ಬೇಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಪ್ರಹ್ಲಾದ ಜೋಷಿ ಉಪಸ್ಥಿತರಿದ್ದರು.

ದೆಹಲಿಯಲ್ಲಿ ಸಿಎಂ ಬೊಮ್ಮಾಯಿ, ಅಮಿತ್ ಶಾ ರವರನ್ನು ಬೇಟಿಯಾಗಿದ್ದು, ಸುಮಾರು 40-45 ನಿಮಿಷಗಳ ಕಾಲ ಸುಧೀರ್ಘ ಚರ್ಚೆ ನಡೆಸಿದ್ದಾರೆ. ಈವೇಳೆ ಕೇಂದ್ರ ನಾಯಕರು ಸಂಪುಟ ಪುನಾರಚನೆ ಬಗ್ಗೆ ಹೆಚ್ಚಿನ ಒಲವು ತೋರಿದ್ದಾರೆ. ಎಂದು ಹೇಳಲಾಗುತ್ತಿದೆ. ಇದೇ ವೇಳೆ ರಾಜ್ಯದಲ್ಲಿನ ಸಧ್ಯದ ಬೆಳವಣಿಗೆಗಳ ಬಗ್ಗೆಯೂ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಒಟ್ಟಾರೆ ಅಮಿತ್ ಶಾ ರವರೊಂದಿಗೆ  ಸಿಎಂ ಸುಧೀರ್ಘ ಚರ್ಚೆ ಭಾರಿ ಕುತೂಹಲವನ್ನು ಮೂಡಿಸಿದೆ. ಸಂಪುಟ ಪುನಾರಚನೆಯೋ ಅಥವ ವಿಸ್ತರಣೆಗೆ ಸಮ್ಮಿತಿ ಸೂಚಿಸಿದ್ದಾರಾ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

Related