Telugu ಚಿತ್ರದ ನಟ Mahesh babu ಏನೇ ಮಾಡಿದರೂ ಅದರ ಹಿಂದೆ ಒಳ್ಳೆಯ ಉದ್ದೇಶ, ಸ್ಟೈಲ್ ಇರುತ್ತೆ

ಮಹೇಶ್ ಅವರು ತಮ್ಮ ಮುಂದಿನ ಚಿತ್ರವಾದ ‘ಸರ್ಕಾರು ವಾರಿ ಪಾಟಾ’  ಬಿಡುಗಡೆಗೆ ಗುತ್ತಿದ್ದಾರೆ. ಇತ್ತೀಚಿಗೆ ಆದಿ ಶೇಸ್ನಟನೆಯ ಮೇಜರ್ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತೆಲುಗು ಚಿತ್ರೋದ್ಯಮದ ಸೂಪರ್ ಸ್ಟಾರ್ ಮಹೇಶ್ ಬಾಬು ಏನೇ ಮಾಡಿದರೂ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಮತ್ತು ಸ್ಟೈಲ್ ಇರುತ್ತದೆ ಎಂದು ಅವರ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಕರೆದು ಹೇಳಬೇಕಿಲ್ಲ. ಈಗಾಗಲೇ ನಟ ಮಹೇಶ್ ಅವರು ತಮ್ಮ ಮುಂದಿನ ಚಿತ್ರವಾದ ‘ಸರ್ಕಾರು ವಾರಿ ಪಾಟಾ’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇತ್ತೀಚಿಗೆ ಆದಿ ಶೇಸ್ ನಟನೆಯ ಮೇಜರ್ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಯಾವ ಕಾರಣಕ್ಕೆ ಪ್ರಿನ್ಸ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಯಾವ ರೀತಿ ಕಥೆಗಳನ್ನು ಕೇಳುಬೇಕು ಅಂದುಕೊಂಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. ಮಹೇಶ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

‘ಬಾಲಿವುಡ್ಸಿನಿಮಾಗಳಿಂದ ನನಗೆ ತುಂಬಾ ಆಫರ್ಗಳು ಬರುತ್ತಿದೆ. ಆದರೆ, ಅವರಿಗೆ ನನಗೆ ಸಂಭಾವನೆ ಕೊಡುವ ಕೆಪಾಸಿಟಿ ಇಲ್ಲ. ನನ್ನ ಖರೀದಿ ಮಾಡಲು ಅವರ ಬಳಿ ಹಣವಿಲ್ಲ ಎಂದು ನನಗೆ ಅನಿಸುತ್ತದೆ. ಹೀಗಾಗಿ ಸುಮ್ಮನೆ ಕಾದು ಸಮಯ ವ್ಯರ್ಥ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಎಲ್ಲವೂ ಸಿಗುತ್ತಿದೆ. ಇಲ್ಲಿನ ಅಭಿಮಾನಿಗಳ ಪ್ರೀತಿ ನನಗೆ ದೊಡ್ಡದು. ಸದಾ ಸಿನಿಮಾ ಮಾಡಬೇಕು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಅಷ್ಟೇ ನನ್ನ ಗುರಿ. ನನ್ನ ಕನಸು ನನಸು ಆಗುತ್ತಿದೆ ಇದಕ್ಕಿಂತ ಸಂತೋಷ ಬೇಕಾ?’ಎಂದು ಮಹೇಶ್​ ಬಾಬು ಹೇಳಿದ್ದಾರೆ.

Related