ದಕ್ಷಿಣ ಕೋರಿಯಾದಲ್ಲಿ ಪ್ರದರ್ಶನಗೊಂಡ ಮೊದಲನೇ ಕನ್ನಡ ಸಿನಿಮಾ: ಕೆಜಿಎಫ್-2

ದಕ್ಷಿಣ ಕೋರಿಯಾದಲ್ಲಿ ಪ್ರದರ್ಶನಗೊಂಡ ಮೊದಲನೇ ಕನ್ನಡ ಸಿನಿಮಾ: ಕೆಜಿಎಫ್-2

ಕೆಜಿಎಫ್-2 ಈಗಾಗಲೇ ಅನೇಕ ದಾಖಲೆಗಳನ್ನು ನಿರ್ಮಾಣ ಮಾಡಿದೆ. ಘಟಾನುಘಟಿ ಸ್ಟಾರ್‌ಗಳ ದಾಖಲೆಗಳನ್ನು ಬ್ರೇಕ್ ಮಾಡಿರುವ ಯಶ್ ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆದಿದೆ. ಹೌದು, ದಕ್ಷಿಣ ಕೊರಿಯಾದ ಸಿಯೋಲ್​​ನಲ್ಲೂ ರಾಕಿ ಭಾಯ್​ ಚಿತ್ರ ಪ್ರದರ್ಶನಗೊಂಡಿದೆ. ಈ ಮೂಲಕ ಸೌತ್ ಕೊರಿಯಾದಲ್ಲಿ ಪ್ರದರ್ಶನಗೊಂಡಿರುವ ಮೊದಲ ಕನ್ನಡ ಚಿತ್ರ ಸಿನಿಮಾ ಇದಾಗಿದೆ.

ಯಶ್ ನಟನೆಯ ಕೆಜಿಎಫ್-2 ಸಿನಿಮಾ ಪ್ರಪಂಚದಾದ್ಯಂತ ಭಾರಿ ಯಶಸ್ಸನ್ನು ಗಳಿಸಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೆಜಿಎಫ್-2 ಬಿಡುಗಡೆಯಾಗಿದೆ.
ಇದೀಗ ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ರಾಕಿ ಭಾಯ್ ಮಾರುಕಟ್ಟೆ ಮತ್ತಷ್ಟು ವಿಸ್ತಾರವಾಗುತ್ತಿದೆ. ಅಭಿಮಾನಿ ಬಳಗ ದೊಡ್ಡದಾಡುತ್ತಿದೆ. ಭಾರತ, ನೇಪಾಳ ಮತ್ತು ಬಾಂಗ್ಲದೇಶದಲ್ಲಿ ರಾಕಿ ಭಾಯ್ ನನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಎಲ್ಲಾ ದೇಶಗಳಲ್ಲಿಯೂ ಅಭಿಮಾನಿಗಳು ಕೆಜಿಎಫ್-2 ನೋಡಿ ಎಂಜಾಯ್ ಮಾಡುತ್ತಿದ್ದಾರೆ. ರಾಕಿ ಭಾಯ್ ನನ್ನು ಹಾಡಿಹೊಗಳುತ್ತಿದ್ದಾರೆ.

ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ಕೆಜಿಎಫ್-2 ಹಿಂದಿ ಅವತರಣಿಕೆಯಲ್ಲಿ ತೆರೆಕಂಡಿದೆ. ಮೊದಲ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್​​ನಲ್ಲಿ ಒಂದಿಷ್ಟು ಫೋಟೋಗಳು ಸಿಕ್ಕಾಪಟ್ಟೆ ವೈರಲ್​​ ಆಗಿವೆ.

Related