ಯುಟ್ಯೂಬ್‌ನಲ್ಲಿ ನ ಫೇಕ್ ನ್ಯೂಸ್‌ಗಳ ಬಗ್ಗೆ ಕ್ಲಾರಿಟಿ ಕೊಟ್ಟ ಶ್ರೀನಿಧಿ ಶೆಟ್ಟಿ

ಯುಟ್ಯೂಬ್‌ನಲ್ಲಿ ನ ಫೇಕ್ ನ್ಯೂಸ್‌ಗಳ ಬಗ್ಗೆ ಕ್ಲಾರಿಟಿ ಕೊಟ್ಟ ಶ್ರೀನಿಧಿ ಶೆಟ್ಟಿ

ಚಿಕ್ಕ ವಯಸ್ಸಿನಲ್ಲೇ ಮಾಡಲ್ ಅಗಬೇಕು ಎಂದು ಕನಸು ಕಂಡ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಾಪ್ಟರ್ 1 ಮೂಲಕ ಕನ್ನಡ ಚಿತ್ರರಂಗದಲ್ಲಿ ಜರ್ನಿ ಆರಂಭಿಸಿದ್ದರು. ಭಾಗ 1 ರಲ್ಲಿ ಶ್ರೀನಿಧಿ ಪಾತ್ರ ಕಡಿಮೆ ಇದ್ದರೂ ಮೊದಲ ಸಿನಿಮಾಗೆ ಇಷ್ಟು ಶಿಸ್ತು ಬೆಸ್ಟ್‌ಎಂದು ಅಭಿಮಾನಿಗಳು ಹೇಳಿದ್ದಾರೆ. ಚಾಪ್ಟರ್‌2ರಲ್ಲಿ ಶ್ರೀನಿಧಿ ಪಾತ್ರಕ್ಕೆ ತೂಕವಿದೆ, ಅದರಲ್ಲೂ ಗರ್ಭಿಣಿ ಆದಾಗ ಅಮ್ಮ ಬರ್ತಿದ್ದಾರೆ ಎಂದು ಹೇಳುವ ಸಾಲು ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಹೀಗೆ ನಟಿ ಶ್ರೀನಿಧಿ ಶೆಟ್ಟಿ ಜೀವನದ ಬಗ್ಗೆ ಯೂಟ್ಯೂಬ್‌ನಲ್ಲಿ ಸಾಕಷ್ಟು ವಿಚಾರಗಳು ಹರಿದಾಡುತ್ತಿರವುದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

‘ಯೂಟ್ಯೂಬ್‌ನಲ್ಲಿ ಸಾಕಷ್ಟು ಜನ ವಿಡಿಯೋ ಮಾಡ್ತಿದ್ದಾರೆ ಶ್ರೀನಿಧಿ ಶೆಟ್ಟಿ ಸಂಭಾವನೆ ಇಷ್ಟು, ಮನೆ ಹೀಗಿದೆ ಅದು ಇದು ಅಂತ. ನನ್ನ ಫ್ರೆಂಡ್ ಮತ್ತು ಕಸಿನ್‌ಗಳು ಈ ಲಿಂಕ್‌ಗಳನ್ನು ಸೆಂಡ್ ಮಾಡಿ ನನಗೆ ವಿಶ್ ಮಾಡುತ್ತಾರೆ. ಅದೆಲ್ಲಾ ನಿಜ ಅಲ್ಲ ಅದನ್ನು ನಂಬ ಬೇಡಿ ಅಂತ ಹೇಳುತ್ತೀನಿ. ನೋಡಿ ನಾನು ಬೇರೆ ಅವರ ಬಗ್ಗೆ ಮಾತನಾಡುವುದಕ್ಕೆ ಆಗೋಲ್ಲ ಆದರೆ ನನ್ನ ಬಗ್ಗೆ ಮಾತನಾಡಿ ಕ್ಲಾರಿಟಿ ಕೊಡಬಹುದು. ಅದೆಲ್ಲಾ ಸುಮ್ಮನೆ ಸುಳ್ಳು. ನಾನು ಈಗಲೂ ಬಾಡಿ ಮನೆಯಲ್ಲಿ ಇರುವುದು. ನಾಲ್ಕು ವರ್ಷಗಳಿಂದ ಇದೆ ಮನೆಯಲ್ಲಿ ಇದ್ದೀನಿ’ ಎಂದು ಖಾಸಗಿ ಸಂದರ್ಶನದಲ್ಲಿ ಶ್ರೀನಿಧಿ ಮಾತ
ನಾಡಿದ್ದಾರೆ.
‘ನನ್ನ ಜರ್ನಿನ ಒಂದು ಪದದಲ್ಲಿ ವರ್ಣನೆ ಮಾಡುವುದಕ್ಕೆ ಕಷ್ಟ. ನಾನು ಮಾಡಬೇಕು ಅಂದುಕೊಂಡಿದನ್ನು ಮಾಡಿದ್ದೀನಿ. ಎಲ್ಲೂ ನಾನು ಇಲ್ಲ ಆಗೋಲ್ಲ ಮಿಡಲ್ ಕ್ಲಾಸ್‌ ಜನರಿಗೆ ಕಷ್ಟ ಅನ್ನೋ ರೀತಿ ಯೋಚನೆ ಮಾಡಿಲ್ಲ. ಶಾಲೆ ಕಾಲೇಜ್‌ಗೆ ಹೋಗಬೇಕಾದರೆ ನಾನು ಐಶ್ವರ್ಯ ಮತ್ತು ಲಾರಾ ದತ್ತ ಕ್ರೌನ್ ಪಡೆಯುತ್ತಿರುವುದನ್ನು ನೋಡಿದ್ದೆ ನಾನು ಹೀಗೆ ಸ್ಪರ್ಧಿಸಿ ಕ್ರೌನ್ ಪಡೆಯಬೇಕು ಎಂದು ಆಸೆ ಇತ್ತು. ಕಲಿಯುವುದು ಮುಖ್ಯ ಹೀಗಾಗಿ ವಿದ್ಯಾಭ್ಯಾಸ ಮುಗಿಸಿ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದೀನಿ ಆದರೆ ನನಗೆ ಇಂಟ್ರೆಸ್ಟ್‌ ಇರಲಿಲ್ಲ ಒಂದು ನಿರ್ಧಾರ ಮಾಡಿ ಇಲ್ಲ ಇದು ಆಗೋಲ್ಲ ನನಗೆ ಈ ಕೆಲಸ ಬೇಡ  ಬೇರೆ ಏನಾದರೂ ಕೆಲಸ ಮಾಡಬೇಕು ಅಂತ ಮುಂದಾದೆ’ ಎಂದು ಶ್ರೀನಿಧಿ ಹೇಳಿದ್ದಾರೆ.

Related