ಸಿಲಿಕಾನ್ ಸಿಟಿಯಲ್ಲಿ ಮತ್ತೇ ಅಲರ್ಟ್: ಬಿಬಿಎಂಪಿ ಮಾರ್ಷಲ್

ಬೆಂಗಳೂರು ಮೇ06 : ನೆರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲೂ ಕಡ್ಡಾಯವಾಗಿ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ  ಅಂತರ ಪಾಲನೆ ಬಗ್ಗೆ ಆದೇಶ ಹೊರಡಿಸಲಾಗಿದೆ. ಹೀಗಾಗಿ ಫೀಲ್ಡ್ ನಲ್ಲಿ ಮತ್ತೊಮ್ಮೆ ಮಾರ್ಷಲ್ ಗಳು ಸಕ್ರಿಯರಾಗಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಈಗಾಗಲೇ ಅರಿವು ಮೂಡಿಸುವ ಯತ್ನ ನಡೆಯುತ್ತಿದ್ದು, ನಗರದಾದ್ಯಂತ ಮಾರ್ಷಗಳ ಜೀಪ್ ಗಳು ಗಸ್ತು ತಿರುಗುತ್ತಿವೆ. ಅಂಗಡಿ ಮುಂಗಟ್ಟುಗಳು, ಶಾಪಿಂಗ್  ಕಾಂಪ್ಲೆಕ್ಸ್, ಬಸ್ ನಿಲ್ದಾಣ, ದೇವಸ್ಥಾನ, ಚರ್ಚ್, ಮಸೀದಿ ಸೇರಿದಂತೆ ಹಲವೆಡೆ ಅರಿವು ಮೂಡಿಸುವ ಕಾರ್ಯ ಆರಂಭವಾಗಿದೆ. ಈ ಬಗ್ಗೆ ಜೊತೆ  ಮಾತನಾಡಿದ ಮಾರ್ಷಲ್, ಕೆಲವರಿಂದ ಪಾಸಿಟಿವ್ ಪ್ರತಿಕ್ರಿಯೆ ಬಂದರೆ, ಕೆಲವರು ನಿರ್ಲಕ್ಷ ತೋರಿದ್ದಾರೆ. ಆದ್ರೆ ಅರಿವು ಮೂಡಿಸೋದೇ ನಮ್ಮ ಕರ್ತವ್ಯವಾಗಿದ್ದು, ಅದನ್ನು ತಪ್ಪದೇ ಮಾಡತ್ತಿದ್ದೇವೆ ಅಂತಾ ತಿಳಿಸಿದ್ದಾರೆ.

Related